ಚಿಕ್ಕಮಗಳೂರು: ಕನ್ನಡ ಭಾಷಾಭಿಮಾನವನ್ನು ಮೂಡಿಸುವ ಹಾಗೂ ನೆಲ-ಜಲದ ಸಂಸ್ಕೃತಿಯನ್ನು ಎತ್ತಿಹಿಡಿಯುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ಪ್ರತಿ ಕನ್ನಡಾಭಿಮಾನಿಯೂ ಕನ್ನಡ ಕಟ್ಟುವ ಕಾಯಕದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಯುರೇಕಾ ಅಕಾಡೆಮಿಯ ಅಧ್ಯಕ್ಷ ದೀಪಕ್ ದೊಡ್ಡಯ್ಯ ತಿಳಿಸಿದ್ದಾರೆ.
ನಗರದ ಹೇಮಾಂಗಣ ಸಭಾಂಗಣದಲ್ಲಿ ಜರುಗಿದ ಕಸಾಪ ನೂತನ ನಗರ ಘಟಕದ ಸೇವಾ ದೀಕ್ಷಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದಿನ ದಿನಗಳಲ್ಲಿ ಮಹಿಳೆಯರು ರಾಷ್ಟ್ರಪತಿ ಹುದ್ದೆಯೂ ಸೇರಿದಂತೆ ಎಲ್ಲಾ ರಂಗಗಳಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದು ಸ್ಮರಿಸುತ್ತಾ ನಗರ ಘಟಕಕ್ಕೆ ಮಹಿಳಾ ಅಧ್ಯಕ್ಷೆಯನ್ನು ನೇಮಿಸಿರುವ ಜಿಲ್ಲಾಧ್ಯಕ್ಷರ ನಿರ್ಧಾರವನ್ನು ಶ್ಲಾಘಿಸಿದರು. ಸಂಸ್ಕೃತಿ ಚಿಂತಕರಾದ ಡಾ. ಪಟೇಲ್ ಪಾಂಡು ಅವರು ಮಾತನಾಡಿ ಸಾಹಿತ್ಯ ಲೋಕಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೊಡುಗೆ ಅಪಾರವಾಗಿದ್ದು ಜಿಲ್ಲಾ ಘಟಕವು ರಾಜ್ಯದಲ್ಲೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷೆ ರೂಪಾ ನಾಯ್ಕ್ ಅವರು ನಗರದ ಬರಹಗಾರರು ಮತ್ತು ಕವಿಗಳ ಪ್ರೋತ್ಸಾಹಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವುದಾಗಿ ಭರವಸೆ ನೀಡಿದ್ದು ಈ ಸಂದರ್ಭದಲ್ಲಿ ಲಲಿತಾಬಾಯಿ, ಆಶಾರಾಜು ಸೇರಿದಂತೆ ನೂತನ ಪದಾಧಿಕಾರಿಗಳ ತಂಡವು ಅಧಿಕಾರ ಸ್ವೀಕರಿಸಿತು.
Kshetra Samachara
31/01/2026 04:55 pm
LOADING...