ಬೆಂಗಳೂರು : ಚಿತ್ರರಂಗದಲ್ಲಿ ಪ್ರೀತಿ ಇರುವಂತೆ ಟೀಕೆಯೂ ಸಹಜ. ವಿಶೇಷವಾಗಿ ನಟ–ನಟಿಯರ ಲುಕ್ ಮತ್ತು ದೇಹದ ಬದಲಾವಣೆಗಳ ಬಗ್ಗೆ ಜನ ಹೆಚ್ಚು ಮಾತನಾಡುತ್ತಾರೆ. ಸ್ವಲ್ಪ ತೂಕ ಹೆಚ್ಚಾದರೂ ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್‌ಗಳು ಶುರುವಾಗುತ್ತವೆ. ಕೆಲವರು ಇದರಿಂದ ಮನಸ್ಸು ಕುಗ್ಗಿಸಿಕೊಳ್ಳುತ್ತಾರೆ, ಆದರೆ ಕೆಲವರು ಧೈರ್ಯವಾಗಿ ಎದುರಿಸುತ್ತಾರೆ.
‘ಮಿಲನ’ ಸಿನಿಮಾದ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದ ನಟಿ ಪಾರ್ವತಿ ಮೆನನ್ ಇತ್ತೀಚೆಗೆ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದಾರೆ. ತೂಕ ಹೆಚ್ಚಾಗಿದೆ ಎಂಬ ಕಾರಣಕ್ಕೆ ಅವರಿಗೆ ಹೇಟ್ ಮೆಸೇಜ್‌ಗಳು ಬಂದಿವೆ. ವಿಶೇಷವಾಗಿ ಕೇರಳ ಭಾಗದಿಂದ ನೆಗೆಟಿವ್ ಕಾಮೆಂಟ್‌ಗಳು ಬಂದಿದ್ದರೂ, ಪಾರ್ವತಿ ಇದಕ್ಕೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಪಾರ್ವತಿ ಮೆನನ್ ಕೇರಳದ ಕೋಳಿಕ್ಕೋಡ್‌ನವರು. ಅವರಿಗೆ ಈಗ 37 ವರ್ಷ. 2006ರಲ್ಲಿ, 17ರ ವಯಸ್ಸಿನಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. 2007ರಲ್ಲಿ ಬಿಡುಗಡೆಯಾದ ‘ಮಿಲನ’ ಸಿನಿಮಾ ಅವರಿಗೆ ದೊಡ್ಡ ಹೆಸರು ತಂದಿತು. ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದ ಈ ಸಿನಿಮಾ ಅವರಿಗೆ ಅಪಾರ ಜನಪ್ರಿಯತೆ ನೀಡಿತು.
ಈಗ ಪಾರ್ವತಿ ಮಲಯಾಳಂ ಸಿನಿಮಾಗಳಲ್ಲಿ ಆಯ್ದ ಪಾತ್ರಗಳನ್ನು ಮಾಡುತ್ತಾ ತಮ್ಮದೇ ದಾರಿಯಲ್ಲಿ ಮುಂದುವರೆಯುತ್ತಿದ್ದಾರೆ. ಟೀಕೆಗಳ ನಡುವೆಯೂ ಅವರು ಆತ್ಮವಿಶ್ವಾಸ ಕಳೆದುಕೊಳ್ಳದೆ ಧೈರ್ಯವಾಗಿ ಸಾಗುತ್ತಿದ್ದಾರೆ.
PublicNext
03/02/2026 07:26 pm
LOADING...