ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

8 ವರ್ಷಗಳ ಬಳಿಕ ಮತ್ತೆ ಒಂದಾದ ರೌಡಿ ಬೇಬಿ ಹಿಟ್ ಜೋಡಿ..!

ಬೆಂಗಳೂರು : ಮಾರಿ 2’ ಸಿನಿಮಾದ ರೌಡಿ ಬೇಬಿ ಹಾಡು ಇಂದಿಗೂ ಜನಪ್ರಿಯವಾಗಿದೆ. ಈ ಹಾಡಿನಲ್ಲಿ ಧನುಷ್ ಮತ್ತು ಸಾಯಿ ಪಲ್ಲವಿ ಅವರ ನಟನೆ ಹಾಗೂ ನೃತ್ಯ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು. ಇಬ್ಬರೂ ಒಳ್ಳೆಯ ಕಲಾವಿದರಾಗಿರುವುದರ ಜೊತೆಗೆ ಅದ್ಭುತ ಡ್ಯಾನ್ಸರ್‌ಗಳೂ ಹೌದು. ಅದಕ್ಕೇ ಈ ಜೋಡಿ ಭಾರೀ ಹಿಟ್ ಆಯಿತು. ಆದರೆ ಆ ಸಿನಿಮಾದ ಬಳಿಕ ಇಬ್ಬರೂ ಮತ್ತೆ ಒಟ್ಟಾಗಿ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸುಮಾರು 8 ವರ್ಷಗಳ ನಂತರ ಈ ಹಿಟ್ ಜೋಡಿ ಮತ್ತೆ ಒಂದಾಗುತ್ತಿದೆ.

ಧನುಷ್ ಅಭಿನಯದ ಡಿ55 ಸಿನಿಮಾಕ್ಕೆ ಸಾಯಿ ಪಲ್ಲವಿ ಆನ್‌ಬೋರ್ಡ್ ಆಗಿರುವುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಮಾರಿ 2 ನಂತರ ಡಿ55 ಸಿನಿಮಾಗೆ ಸಾಯಿ ಪಲ್ಲವಿ ನಾಯಕಿ ಎನ್ನುವ ಸುದ್ದಿಗಳು ಕೇಳಿಬಂದಿದ್ದವು. ಆದರೆ ಈ ಚಿತ್ರಕ್ಕೆ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎನ್ನುವ ಕಾರಣಕ್ಕೆ ಆ ವದಂತಿಗೆ ತೆರೆ ಬಿದ್ದಿತ್ತು. ಇದೀಗ ಡಿ55 ಸಿನಿಮಾದಲ್ಲಿ ಶ್ರೀಲೀಲಾ ಹಾಗೂ ಸಾಯಿ ಪಲ್ಲವಿ ಇಬ್ಬರೂ ನಾಯಕಿಯರು ಎಂಬುದು ಸ್ಪಷ್ಟವಾಗಿದೆ. ರಾಮಾಯಣ ಚಿತ್ರದ ಬಳಿಕ ಸಾಯಿ ಪಲ್ಲವಿ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಇದೀಗ ಧನುಷ್ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ಈ ಚಿತ್ರವನ್ನು ಅಮರನ್ ಸಿನಿಮಾ ನಿರ್ದೇಶಿಸಿದ್ದ ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡುತ್ತಿದ್ದಾರೆ.

Edited By : Vinayak Patil
PublicNext

PublicNext

03/02/2026 07:47 pm

Cinque Terre

13.7 K

Cinque Terre

0