ಚಿಕ್ಕಮಗಳೂರು: ಕಾಫಿನಾಡಿನ ಪ್ರಸಿದ್ಧ ಶ್ರೀ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ವೈಭವದಿಂದ ಆಯೋಜಿಸಲಾಗಿತ್ತು. ಈ ವಿಶೇಷ ಸಂದರ್ಭದಲ್ಲಿ ದೇವಸ್ಥಾನದ ಆವರಣವನ್ನು ತಳಿರು ತೋರಣಗಳಿಂದ ಮತ್ತು ಆಕರ್ಷಕ ದೀಪಾಲಂಕಾರದಿಂದ ಅಲಂಕರಿಸಲಾಗಿದ್ದು ಬೆಳ್ಳಂಬೆಳಗ್ಗೆಯಿಂದಲೇ ಪೂಜೆ, ಪುಣ್ಯಾಹವಾಚನ ಹಾಗೂ ಅಷ್ಟಲಕ್ಷ್ಮಿಯರಿಗೆ ವಿಶೇಷ ಅಭಿಷೇಕಗಳೊಂದಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಯಿತು.
ಲೋಕ ಕಲ್ಯಾಣ ಹಾಗೂ ಭಕ್ತಾದಿಗಳ ಕ್ಷೇಮಾಭಿವೃದ್ಧಿಗಾಗಿ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ವಿಶೇಷ ಲಕ್ಷ್ಮಿ ಹೋಮ ಮತ್ತು ಮಹಾಮಂಗಳಾರತಿ ನೆರವೇರಿದ್ದು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯರ ದರ್ಶನ ಪಡೆದು ಪುನೀತರಾದರು. ವಾರ್ಷಿಕೋತ್ಸವದ ಅಂಗವಾಗಿ ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು
Kshetra Samachara
31/01/2026 05:21 pm
LOADING...