ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಹಂಪಾಪುರದಲ್ಲಿ ದೈವೀ ಸಂಭ್ರಮ - ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಲಕ್ಕಮ್ಮದೇವಿ ಗೋಪುರ ಕಳಸ ಪ್ರತಿಷ್ಠಾಪನೆ!

ಚಿಕ್ಕಮಗಳೂರು: ತಾಲ್ಲೂಕಿನ ಹಂಪಾಪುರದಲ್ಲಿ ಶ್ರೀ ಲಕ್ಕಮ್ಮದೇವಿ ನೂತನ ದೇವಾಲಯ ಪ್ರವೇಶ ಹಾಗೂ ಗೋಪುರ ಕಳಸ ಪ್ರತಿಷ್ಠಾಪನಾ ಮಹೋತ್ಸವವು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಅತ್ಯಂತ ಸಡಗರದಿಂದ ನೆರವೇರಿತು. ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಗೋಪುರ ಕಳಸಕ್ಕೆ ವಿಶೇಷ ಪೂಜೆ ಸಲ್ಲಿಸಿ ಪ್ರತಿಷ್ಠಾಪನಾ ಕಾರ್ಯವನ್ನು ನೆರವೇರಿಸಿದ್ರು. ಈ ಸಂದರ್ಭದಲ್ಲಿ ದೇವಿಯ ಮೂಲವಿಗ್ರಹಗಳಿಗೆ ಪ್ರಧಾನ ಕುಂಭೋದ್ವಾಸನೆ, ಗ್ರಾಮಾಲಯ ಪ್ರದಕ್ಷಿಣೆ ಮತ್ತು ಪ್ರಾಣ ಪ್ರತಿಷ್ಠಾಪನೆಯಂತಹ ಶ್ರದ್ಧಾಪೂರ್ವಕ ವಿಧಿವಿಧಾನಗಳು ನಡೆದವು.

ಅಲ್ಲದೆ ಅಕ್ಷ್ಮೀನ್ಮೋಚನ, ಬಲಿಹರಣ, ಗೋಬ್ರಾಹ್ಮಣ ಪೂಜೆ, ಧಾನ್ಯ ದೀಪದರ್ಶನ ಮತ್ತು ಅಷ್ಟವದಾನ ಸೇವೆಯಂತಹ ನಾನಾ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದೇವಸ್ಥಾನದ ಆವರಣದಲ್ಲಿ ದೈವೀ ಕಳೆ ಮನೆಮಾಡಿತ್ತು. ನೂತನ ಆಲಯದಲ್ಲಿ ದೇವಿಯ ದರ್ಶನ ಪಡೆದು ಪುನೀತರಾದ ಭಕ್ತಾದಿಗಳು ಮಹಾನಿವೇದನೆ ಮತ್ತು ತೀರ್ಥ ಪ್ರಸಾದ ಸ್ವೀಕರಿಸುವ ಮೂಲಕ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು.

Edited By : PublicNext Desk
Kshetra Samachara

Kshetra Samachara

31/01/2026 06:44 pm

Cinque Terre

2.8 K

Cinque Terre

0

ಸಂಬಂಧಿತ ಸುದ್ದಿ