ಕೊಪ್ಪಳ:- ಕೊಪ್ಪಳ ಕಿಮ್ಸ್ ಆಡಳಿತಾಧಿಕಾರಿ ಬಿ.ಕಲ್ಲೇಶ್ ಮೇಲೆ ಲೋಕಾಯುಕ್ತ ದಾಳಿ ಮುಕ್ತಾಯವಾಗಿದೆ. ಒಟ್ಟು 9 ಕಡೆ ದಾಳಿ ಮಾಡಿದ ಅಧಿಕಾರಿಗಳು ₹28.24 ಲಕ್ಷ ಮೌಲ್ಯದ ಏಳು ನಿವೇಶನಗಳು, ಕನಿಷ್ಠ ₹10 ಕೋಟಿ ಬೆಲೆಬಾಳುವ ಮನೆ, ಶಾಲೆ ಮತ್ತು ಹಾಸ್ಟೆಲ್ ಕಟ್ಟಡ, ₹3.23 ಕೋಟಿ ಮೌಲ್ಯದ 31.25 ಎಕರೆ ಕೃಷಿ ಭೂಮಿ, ಮನೆಯಲ್ಲಿ ₹37 ಲಕ್ಷ ನಗದು, 1104 ಗ್ರಾಂ ಚಿನ್ನಾಭರಣ, ಮೂರೂವರೆ ಕೆ.ಜಿ. ಬೆಳ್ಳಿ ಪತ್ತೆಯಾಗಿದೆ.
ಬೆಳ್ಳಿ ಹಾಗೂ ಬಂಗಾರದ ಮೌಲ್ಯವೇ ಅಂದಾಜು ₹1.13 ಕೋಟಿ ಎಂದು ಅಂದಾಜಿಸಲಾಗಿದೆ. ₹38.60 ಲಕ್ಷ ಬೆಲೆಬಾಳುವ ಒಂದು ಕಾರು, ಒಂದು ಬೈಕ್, ಬ್ಯಾಂಕ್ ಖಾತೆಯಲ್ಲಿ ₹61 ಲಕ್ಷ ನಗದು ಎಲ್ಲವೂ ಸೇರಿ ₹10.46 ಕೋಟಿಯಷ್ಟು ಆಸ್ತಿಯ ಮಾಹಿತಿ ಲಭ್ಯವಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ. ತಪಾಸಣಾ ಕಾರ್ಯ ಮುಗಿಸಿದ ಬಳಿಕ ಇಲ್ಲಿನ ಲೋಕಾಯುಕ್ತ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
PublicNext
31/01/2026 10:34 pm
LOADING...