ರಬಕವಿ-ಬನಹಟ್ಟಿ: ಹಸಿರು ಆಕರ್ಷಕ ಬಣ್ಣದ ದೊಡ್ಡಗಾತ್ರದ ಅಪರೂಪದ ಚಿಟ್ಟೆಯೊಂದು ಬನಹಟ್ಟಿ ನಗರದಲ್ಲಿ ಕಂಡುಬಂದಿದೆ.
ಕರ್ನಾಟಕ ರಾಜ್ಯದಲ್ಲಿಯೇ ಅಪರೂಪವಾಗಿ ಕಂಡುಬರುವ ಈ ಚಿಟ್ಟೆಯು ನೋಡುಗರ ಗಮನಸೆಳೆಯಿತು. ಪಾತರಗಿತ್ತಿ ನೋಡಿ ಪ್ರೀತಿಸುವ ಮಕ್ಕಳು ಸೇರಿದಂತೆ ದೊಡ್ಡವರು ಇದನ್ನು ನೋಡಿದಾಗ, ಆಕಾರದಲ್ಲಿ ದೊಡ್ಡದಾಗಿರುವ ಚಿಟ್ಟೆಯನ್ನು ನೋಡಿ ಕೆಲಹೊತ್ತು ಹೆದರಿ ದೂರ ಸರಿದರು.
ಈ ಚಿಟ್ಟೆಯು ಹಾಕ್ ಮಾಥ್ ಕುಟುಂಬಕ್ಕೆ ಸೇರಿದ ಚಿಟ್ಟೆ ಎನ್ನಲಾಗಿದ್ದು, ಒಲಿಯಾಂಡರ್ ಹಾಕ್ ಮಾಥ್ ಎಂದು ಕರೆಯಲಾಗುತ್ತದೆ. ಈ ಚಿಟ್ಟೆಯು ರಾತ್ರಿ ಸಮಯದಲ್ಲಿ ಹಾರುತ್ತದೆ. ಮತ್ತು ದೀಪದ ಬೆಳಕಿಗೆ ಬರುತ್ತದೆ ಎಂಬುದು ಆನ್‌ಲೈನ್ ದಿಂದ ಸಿಗುವ ಮಾಹಿತಿಯಾಗಿದೆ.
ರಾಜ್ಯದಲ್ಲಿ ಅಪರೂಪವಾಗಿ ಸಿಗುವ ಇಂತಹ ಚಿಟ್ಟೆಯು ಬಣ್ಣದ ಸಿರೆ ನೆಯ್ಗೆ ಮಾಡುವ ನೇಕಾರ ನಗರಿಯಲ್ಲಿ ಗಮನಸೆಳೆದಿದ್ದು, ವಿಶೇಷವಾಗಿತ್ತು.
Kshetra Samachara
31/01/2026 10:44 pm
LOADING...