ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಬಕವಿ-ಬನಹಟ್ಟಿ : ಹನಗಂಡಿಯಲ್ಲಿ ನೂತನ ಕಲ್ಯಾಣಿ ಲೋಕಾರ್ಪಣೆ

ರಬಕವಿ-ಬನಹಟ್ಟಿ : ವಿಶಾಲವಾದ ಗುಡ್ಡದ ಪ್ರದೇಶದಲ್ಲಿರುವ ದಿಗಂಬರೇಶ್ವರ ದೇವಸ್ಥಾನದ ಆವರಣದಲ್ಲಿ ಕಲ್ಯಾಣಿ ನಿರ್ಮಿಸಿರುವುದು ಆಧ್ಯಾತ್ಮಿಕ ಚೇತನ ಶಕ್ತಿಯನ್ನು ಹೆಚ್ಚಿಸಲು ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹಳಿಂಗಳಿ ಕಮರಿಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ತಾಲೂಕಿನ ಹನಗಂಡಿ ಗ್ರಾಮದ ದಿಗಂಬರೇಶ್ವರ ದೇವಸ್ಥಾನ ಆವರಣದಲ್ಲಿ ನಿರ್ಮಿಸಲಾದ 'ಕಲ್ಯಾಣಿ ಉದ್ಘಾಟನೆ' ನಿಮಿತ್ಯ ಸೋಮವಾರ ಹಮ್ಮಿಕೊಂಡ ಉಮಾಮಹೇಶ್ವರಿ, ಗಂಗಾಪೂಜೆ, ನವಗ್ರಹ ಹಾಗೂ ಹೋಮಹವನ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ, ಮಾತನಾಡಿ, ದೇವರ ಪೂಜಾದಿಗಳಿಗಾಗಿ ಕಲ್ಯಾಣಿಯ ತೀರ್ಥವು ಸರ್ವಶ್ರೇಷ್ಠವಾಗಿದ್ದು, ನಿಸರ್ಗದತ್ತವಾದ ಈ ದೇವಸ್ಥಾನದಲ್ಲಿರುವ ಕಲ್ಯಾಣಿ ವಿಶೇಷತೆಗಳನ್ನು ಒಳಗೊಳ್ಳಲು ಕಾರಣವಾಗುತ್ತದೆ ಎಂದರು.

ಶಾಸಕ ಸಿದ್ದು ಸವದಿ ಮಾತನಾಡಿ, ಗ್ರಾಮದೇವತೆ ದಿಗಂಬರೇಶ್ವರ ದೇವಸ್ಥಾನ ಆವರಣದಲ್ಲಿ ಸರ್ಕಾರದ ಯೋಜನೆಯಡಿಯಲ್ಲಿ ನಿರ್ಮಾಣವಾದ ಕಲ್ಯಾಣಿ ದರ್ಶನವು ನಮಗೆ ಸಂತೋಷವನ್ನು ನೀಡಿದೆ. ಭಕ್ತರು ಕಲ್ಯಾಣಿಯ ದರ್ಶನ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಅವಧೂತ ಮಠದ ಚಿದಾನಂದ ಶ್ರೀ, ಅರ್ಚಕರಾದ ಸಿದ್ದಪ್ಪ ಪೂಜಾ

Edited By : PublicNext Desk
PublicNext

PublicNext

03/02/2026 04:23 pm

Cinque Terre

4.35 K

Cinque Terre

0

ಸಂಬಂಧಿತ ಸುದ್ದಿ