ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಶಾಲಾ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ : ಬಿಸಿಯೂಟದ ತಟ್ಟೆ ತೊಳೆಯಲು ಕೊಳಚೆ ನೀರು!

ಬಾಗಲಕೋಟೆ: ಚರಂಡಿ ಪಕ್ಕದಲ್ಲಿನ ಪೈಪ್ ನೀರಲ್ಲಿ ಶಾಲಾ ಮಕ್ಕಳು ಪ್ಲೇಟ್ ತೊಳೆದಿದ್ದಾರೆ. ಆಲಬಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳು, ಬಿಸಿಯೂಟ ನಂತರ ಪ್ಲೇಟ್ ತೊಳೆಯಲು ನೀರಿನ ವ್ಯವಸ್ಥೆ ಇಲ್ಲದ ಹಿನ್ನೆಲೆ ಕೊಳಕು ನೀರಿನಲ್ಲಿ ಪ್ಲೇಟ್ ತೊಳೆದಿದ್ದಾರೆ.

ಪ್ಲೇಟ್ ತೊಳೆಯಲು ಸೂಕ್ತ ಸ್ಥಳದಲ್ಲಿ ನೀರಿನ ಸೌಲಭ್ಯ ಕಲ್ಪಿಸದೇ ನಿರ್ಲಕ್ಷ್ಯ ವಹಿಸಿದ್ದು ಬೆಳಕಿಗೆ ಬಂದಿದೆ. ಶಾಲಾ ಸುಧಾರಣಾ ಸಮಿತಿ ಹಾಗೂ ಶಿಕ್ಷಕರು ಶಿಕ್ಷಣ ಇಲಾಖೆ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಮಕ್ಕಳು ಚರಂಡಿ ಪಕ್ಕ ಪ್ಲೇಟ್ ತೊಳೆಯುವ ಸ್ಥಿತಿ ಕಂಡು ಸಾರ್ವಜನಿಕರೇ ಬೇಸರ ವ್ಯಕ್ತ ಪಡಿಸಿದ್ದಾರೆ.

ಶಿಕ್ಷಣ ಇಲಾಖೆಗೆ ಸಾಮಾಜಿಕ ಜಾಲತಾಣದಲ್ಲಿ ಛೀಮಾರಿ ಹಾಕುತ್ತಿರುವ ಜನರು ಇನ್ನಾದರೂ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಲಬಾಳ ಗ್ರಾಮದಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ.

Edited By :
PublicNext

PublicNext

29/01/2026 12:07 pm

Cinque Terre

11.83 K

Cinque Terre

0

ಸಂಬಂಧಿತ ಸುದ್ದಿ