ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: ಹನಿ ನೀರು ಕಾಣದ ಶುದ್ಧ ಕುಡಿಯುವ ನೀರಿನ ಘಟಕ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಬನಹಟ್ಟಿ ಪಟ್ಟಣದ ವಾರ್ಡ್ 12 ರ ಸೋಮವಾರ ಪೇಟೆ ಕುರುಬರ ಗಲ್ಲಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಹನಿ ನೀರಿಲ್ಲದೇ ಬಣಗುಡುತ್ತಿದೆ.

ಅಂದಾಜು 11 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಘಟಕಕ್ಕೆ ನೀರು ಪೂರೈಸಲು ಪ್ರತ್ಯೇಕ ಕೊಳವೆಬಾವಿ ವ್ಯವಸ್ಥೆ ಮಾಡಲಾಗಿದೆ. ಆದರೆ ವರ್ಷವಿಡೀ ಸೇರಿದಂತೆ ಈಗಲೂ ನೀರಿನ ಘಟಕ ಬಂದ್ ಆದ ಸ್ಥಿತಿಯಲ್ಲಿ ಇದೆ.

ತಲೆಸುಡುವ ಬಿರುಬಿಸಿಲು ಈಗಾಗಲೇ ಪ್ರಾರಂಭವಾಗಿದೆ. ಬೇಸಿಗೆ ಸಂದರ್ಭದಲ್ಲಿ ಹನಿ ನೀರಿಗೂ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗುವ ಮುನ್ನ ಸರ್ಕಾರದ ಸುಪರ್ದಿಯಲ್ಲಿರುವ ಇಂತಹ ಘಟಕಗಳು ಚಾಲು ಆದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಘಟಕ ಪ್ರಾರಂಭಿಸುವರೇ ಎಂದು ಕಾದುನೊಡಬೇಕಿದೆ.

Edited By : Shivu K
PublicNext

PublicNext

23/01/2026 10:35 pm

Cinque Terre

15.92 K

Cinque Terre

0

ಸಂಬಂಧಿತ ಸುದ್ದಿ