ಜಮಖಂಡಿ: ಮಕ್ಕಳನ್ನು ದೇವರ ಸಮಾನ ಎನ್ನುತ್ತಾರೆ. ಆದರೆ ಈ ದೃಶ್ಯ ನೋಡಿ…ಇದು ಜಮಖಂಡಿ ತಾಲೂಕಿನ ಆಲಬಾಳ ಗ್ರಾಮದಲ್ಲಿ ನಡೆದ ಘಟನೆ. ಸರ್ಕಾರಿ ಶಾಲೆಯ ಮಕ್ಕಳು ಕೊಳಚೆ ನೀರಿನಲ್ಲಿ ಊಟ ಮಾಡಿದ ತಟ್ಟೆಗಳನ್ನು ತೊಳೆಯುತ್ತಿದ್ದಾರೆ. ಇದು ಕೇವಲ ನಿರ್ಲಕ್ಷ್ಯವಲ್ಲ, ಇದು ಮಕ್ಕಳ ಹಕ್ಕುಗಳ ಮೇಲಿನ ನೇರ ದಾಳಿ.
ಶಿಕ್ಷಣ ಇಲಾಖೆ,ಶಿಕ್ಷಣ ಸಚಿವರು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ —ದಯವಿಟ್ಟು ಸ್ವಲ್ಪ ಮಕ್ಕಳ ಕಡೆ ಗಮನ ಹರಿಸಿ.“ಇಂದಿನ ಮಕ್ಕಳು ನಾಳಿನ ಪ್ರಜೆಗಳು” ಎಂಬ ಮಾತು ಹಾಳೆಗಳ ಮೇಲೆ ಮಾತ್ರ ಇರಬಾರದು. ಅದು ನೆಲದ ಮೇಲೆ ಕಾರ್ಯರೂಪಕ್ಕೆ ಬರಬೇಕು. ಮಕ್ಕಳ ಆರೋಗ್ಯ, ಗೌರವ ಮತ್ತು ಭವಿಷ್ಯವನ್ನು ಹಾನಿ ಮಾಡುತ್ತಿರುವವರಿಗೆ ತಕ್ಕ ಶಿಕ್ಷೆ ನೀಡಬೇಕು.
ಇದು ರಾಜಕೀಯ ವಿಷಯವಲ್ಲ, ಇದು ಮಾನವೀಯತೆ ಮತ್ತು ಮಕ್ಕಳ ಭವಿಷ್ಯದ ಪ್ರಶ್ನೆ. ದಯವಿಟ್ಟು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ
ವರದಿ : ವಿನೋದ ಸೂರಗೊಂಡ ಪಬ್ಲಿಕ್ ನೆಕ್ಸ್ಟ್ ಜಮಖಂಡಿ
PublicNext
28/01/2026 10:01 pm
LOADING...