ರಬಕವಿ-ಬನಹಟ್ಟಿ: ದಾನ ಧರ್ಮಗಳನ್ನು ಮಾಡುವುದರಿಂದ ಪುಣ್ಯದ ಬುತ್ತಿ ಬೆಳೆಯುತ್ತಾ ಹೋಗುತ್ತದೆ; ಆ ಪುಣ್ಯವೇ ನಮ್ಮನ್ನು ರಕ್ಷಿಸುತ್ತದೆ ಎಂದು ಮೈಂದರಗಿಯ ಅಭಿನವ ರೇವಣಸಿದ್ಧ ಪಟ್ಟದದೇವರು ನುಡಿದರು.
ಪ್ರವಚನ ಮತ್ತು ಆಶೀರ್ವಚನ
ಬನಹಟ್ಟಿಯ ಈಶ್ವರಲಿಂಗ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ನಡೆದ ಶ್ರೀ ದೇವರದಾಸಿಮಯ್ಯ ದೈವಮಂಡಳದ ಶತಮಾನೋತ್ಸವ ಹಾಗೂ ಮೂರ್ತಿಪ್ರತಿಷ್ಠಾಪನಾ ಕಾರ್ಯಕ್ರಮದ 2ನೇ ದಿನದಂದು ಅವರು ಪ್ರವಚನ ನೀಡಿದರು. ಬೈಲಹೊಂಗಲದ ಮಹಾದೇವಾನಂದ ಶ್ರೀ ಹಾಗೂ ಒಳಸಂಗದ ಓಂಶಂಕರ ಶಾಸ್ತ್ರೀಗಳು ಆಶೀರ್ವಚನ ನೀಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಪ್ರತಿಭಾವಂತರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ, ಹುಬ್ಬಳ್ಳಿಯ ಡಾ. ಗಂಗೂಬಾಯಿ ಹಾನಗಲ್ ಗುರುಕುಲದ ಹಳೆಯ ವಿದ್ಯಾರ್ಥಿನಿ ಹಾಗೂ ಪ್ರತಿಭಾವಂತ ಸಂಗೀತ ಶಿಕ್ಷಕಿ ಅಶ್ವಿನಿ ಬುದ್ನಿ ಅವರ ಸಂಗೀತ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಅವರು ಇದೇ ವೇಳೆ ತಮ್ಮ ಗಾಯನ ಪ್ರಸ್ತುತಪಡಿಸಿ ರಂಜಿಸಿದರು. ಇದಲ್ಲದೆ, ಇಬ್ಬರು ಬಾಲಕಿಯರು ಭರತನಾಟ್ಯ ಪ್ರದರ್ಶಿಸಿ ಸನ್ಮಾನಕ್ಕೆ ಭಾಜನರಾದರು.
ವೇದಿಕೆಯಲ್ಲಿ ಮಲ್ಲಿಕಾರ್ಜುನ ತುಂಗಳ, ಆರ್.ಡಿ. ಬದ್ರನ್ನವರ, ವೈದ್ಯ ಜಿ.ಎಸ್. ಚಿತ್ತರಗಿ, ವೀರೂಪಾಕ್ಷಪ್ಪ ಕೊಕಟನೂರ, ಮೈಂದರಗಿಯ ಸಿದ್ದಾರೂಢ ಶರಣರು, ಅಗ್ರಾಣೆಪ್ಪ ಬುದ್ನಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Kshetra Samachara
03/02/2026 09:19 am
LOADING...