ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WPL 2026: ರೋಚಕ ಗೆಲುವಿನೊಂದಿಗೆ ಪ್ಲೇಆಫ್‌ಗೆ ಡಿಸಿ ಎಂಟ್ರಿ - ಟೂರ್ನಿಯಿಂದ ಎಂಐ ಔಟ್‌.!

ವಡೋದರಾದಲ್ಲಿ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿದ ದೆಹಲಿ ಕ್ಯಾಪಿಟಲ್ಸ್, ಡಬ್ಲ್ಯೂಪಿಎಲ್ 2026 ಪ್ಲೇಆಫ್‌ಗೆ ಅಧಿಕೃತವಾಗಿ ಪ್ರವೇಶಿಸಿದೆ.

ಮೊದಲು ಬ್ಯಾಟ್ ಮಾಡಿದ ಯುಪಿ ವಾರಿಯರ್ಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತು. ದೆಹಲಿ ಪರ ಮಾರಕ ಬೌಲಿಂಗ್ ಮಾಡಿದ ಮರಿಜಾನ್ನೆ ಕಪ್ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಈ ಸವಾಲಿನ ಗುರಿಯನ್ನು ಬೆನ್ನಟ್ಟಿದ ದೆಹಲಿ ಕ್ಯಾಪಿಟಲ್ಸ್, 18.4 ಓವರ್‌ಗಳಲ್ಲಿ 123 ರನ್ ಗಳಿಸಿ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

ಟೂರ್ನಿಯಿಂದ ಮುಂಬೈ ಹೊರಕ್ಕೆ

ಈ ಗೆಲುವಿನೊಂದಿಗೆ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಟೂರ್ನಿಯಿಂದ ಹೊರಬಿದ್ದರೆ, ದೆಹಲಿ ಕ್ಯಾಪಿಟಲ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

Edited By : Vijay Kumar
PublicNext

PublicNext

02/02/2026 08:10 am

Cinque Terre

14.31 K

Cinque Terre

0

ಸಂಬಂಧಿತ ಸುದ್ದಿ