ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಸಿಸಿ ಭಾರತದ ಒತ್ತೆಯಾಳು, ಕ್ರಿಕೆಟ್ ಉಳಿಸಲು ಹೊಸ ಮಂಡಳಿ ಬೇಕು: ಪಾಕ್ ಸಚಿವ

ಇಸ್ಲಾಮಾಬಾದ್: ಭಾರತ ವಿರುದ್ಧದ 2026ರ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ಘೋಷಣೆಯ ಬೆನ್ನಲ್ಲೇ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಮಂಗಳವಾರ ಹೊಸ ಜಾಗತಿಕ ಕ್ರಿಕೆಟ್ ಆಡಳಿತ ಮಂಡಳಿಯ ರಚನೆಗೆ ಕರೆ ನೀಡಿದ್ದಾರೆ.

ಈ ಬಗ್ಗೆ ಖವಾಜಾ ಆಸಿಫ್ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದು, "ಸಜ್ಜನರ ಆಟದ ಸ್ಫೂರ್ತಿಯನ್ನು ಜೀವಂತವಾಗಿಡಲು ಕ್ರಿಕೆಟ್‌ಗೆ ಹೊಸ ಅಂತರರಾಷ್ಟ್ರೀಯ ಸಂಘಟನೆಯ ಅಗತ್ಯವಿದೆ, ಏಕೆಂದರೆ ಐಸಿಸಿ ದಕ್ಷಿಣ ಏಷ್ಯಾದಲ್ಲಿ ಭಾರತೀಯ ರಾಜಕೀಯ ಹಿತಾಸಕ್ತಿಗಳಿಗೆ ಒತ್ತೆಯಾಳಾಗಿದೆ," ಎಂದು ಗಂಭೀರ ಆರೋಪ ಮಾಡಿದ್ದಾರೆ.

Edited By : Vijay Kumar
PublicNext

PublicNext

04/02/2026 07:33 am

Cinque Terre

10.03 K

Cinque Terre

0

ಸಂಬಂಧಿತ ಸುದ್ದಿ