ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಂಸ್ಕೃತಿಕ ನಗರಿಗೆ MDMA ಕಂಟಕ : ಮೈಸೂರಲ್ಲಿ ಡ್ರಗ್ಸ್ ಕಾರ್ಖಾನೆಗಳ ಬೆನ್ನಟ್ಟಿದ ಖಾಕಿ ಪಡೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನ MDMA ಡ್ರಗ್ಸ್ ಹೆಮ್ಮಾರಿ ಕಾಡುತ್ತಿದೆ.ಆರು ತಿಂಗಳ ಅಂತರದಲ್ಲಿ ಎರಡು MDMA ತಯಾರಿಕಾ ಘಟಕ ಪತ್ತೆಯಾದ ಹಿನ್ನೆಲೆ ಮೈಸೂರು ಖಾಕಿ ಪಡೆಯ ನಿದ್ರೆ ಕೆಡಿಸಿದೆ.ಮಾದಕ ವಸ್ತು ಹಾವಳಿಗೆ ಬ್ರೇಕ್ ಹಾಕಲು ಸಮಾಜಘಾತುಕ ಶಕ್ತಿಗಳ ವಿರುದ್ಧ ಮೈಸೂರು ಪೊಲೀಸರು ಸಮರ ಸಾರಿದ್ದಾರೆ.

ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಹಾಗೂ ಡಿಸಿಪಿ ಸುಂದರ್ ರಾಜ್ ಮಾರ್ಗದರ್ಶನದಲ್ಲಿ ಎಸಿಪಿ ರವಿಪ್ರಸಾದ್ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಗಳನ್ನೊಳಗೊಂಡ 14 ತಂಡಗಳನ್ನ ರಚಿಸಿ ಕೈಗಾರಿಕಾ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.ಈಗಾಗಲೇ ಕೈಗಾರಿಕೆಗಳಲ್ಲಿ ತಪಾಸಣೆಯನ್ನ ತೀವ್ರಗೊಳಿಸಿದ್ದಾರೆ.ಅದರಲ್ಲೂ ಕೆಮಿಕಲ್ ಆಧಾರಿತ ಫ್ಯಾಕ್ಟರಿಗಳನ್ನ ವಿಶೇಷವಾಗಿ ಗುರಿ ಮಾಡಿರುವ ಪೊಲೀಸರು ಇಂಚಿಂಚೂ ಪರಿಶೀಲನೆ ನಡೆಸುತ್ತಿದ್ದಾರೆ.

ಹೆಬ್ಬಾಳು, ಹೂಟಗಳ್ಳಿ, ಕೂರ್ಗಳ್ಳಿ, ಮೇಟಗಳ್ಳಿ, ಬನ್ನಿಮಂಟಪ, ಹಿನಕಲ್ ಕೈಗಾರಿಕಾ ಪ್ರದೇಶಗಳಿಗೆ ಲಗ್ಗೆ ಹಾಕಿ ತಪಾಸಣೆ ತೀವ್ರಗೊಳಿಸಿದ್ದಾರೆ.ಕಳೆದ ಮೂರು ದಿನಗಳಲ್ಲಿ ಮೈಸೂರು ಮಾತ್ರವಲ್ಲದೆ ಮಂಡ್ಯ ಜಿಲ್ಲೆ ಸೇರಿದಂತೆ 250 ಕ್ಕೂ ಹೆಚ್ಚು ಫ್ಯಾಕ್ಟರಿಗಳ ತಪಾಸಣೆ ನಡೆಸಲಾಗಿದೆ.ಫ್ಯಾಕ್ಟರಿಗೆ ಸಂಬಂಧಿಸಿದ ಗೋಡೌನ್,ಇಂಡಸ್ಟ್ರಿಯಲ್ ಶೆಡ್ ಸಹ ಟಾರ್ಗೆಟ್ ಮಾಡಿ ಪರಿಶೀಲನೆ ನಡೆಸಲಾಗಿದೆ.

ಜುಲೈ 2025 ರಲ್ಲಿ ಮೈಸೂರಿನ ಸಿದ್ದಿಕ್ ನಗರ ರಿಂಗ್ ರಸ್ತೆ ಬಳಿ ಮುಂಬೈನ ನಾರ್ಕೊಟಿಕ್ ಪೊಲೀಸ್ ತಂಡ MDMA ಮಾದಕ ವಸ್ತು ತಯಾರಿಸುವ ಘಟಕ ಪತ್ತೆ ಮಾಡಿ ಕೋಟ್ಯಂತರ ಮೌಲ್ಯದ ಮಾದಕ ಹಾಗೂ ಕಚ್ಚಾ ವಸ್ತುಗಳನ್ನ ವಶಪಡಿಸಿಕೊಂಡಿದ್ದ ಪ್ರಕರಣ ಮಾಸುವ ಮುನ್ನವೇ ನಾಲ್ಕು ದಿನಗಳ ಹಿಂದೆ ದೆಹಲಿಯ NCB ತಂಡ ಹೆಬ್ಬಾಳ್ ಕೈಗಾರಿಕಾ ಪ್ರದೇಶದಲ್ಲಿ ಫಿನಾಯಿಲ್ ಉತ್ಪಾದನೆ ಮಾಡುವ ಸೋಗಿನಲ್ಲಿ ಮಾದಕ ವಸ್ತು ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಕಚ್ಚಾ ಸಾಮಗ್ರಿಗಳನ್ನ ವಶಪಡಿಸಿಕೊಂಡಿದೆ.ಈ ಎರಡು ಪ್ರಕರಣಗಳು ಪೊಲೀಸರ ಕರ್ತವ್ಯವನ್ನ ಪ್ರಶ್ನಿಸುವಂತೆ ಮಾಡಿರುವುದರಲ್ಲಿ ಸಂದೇಹವಿಲ್ಲ.ಇಂತಹ ಪ್ರಕರಣಗಳ ಮತ್ತೆ ಮರುಕಳಿಸಬಾರದೆಂಬ ಉದ್ದೇಶದಿಂದ ಫ್ಯಾಕ್ಟರಿಗಳ ತಪಾಸಣೆ ಕಾರ್ಯ ಆರಂಭಿಸಿದೆ. ಮೈಸೂರು ಪೊಲೀಸರಿಗೆ FSL ತಂಡವೂ ಸಾಥ್ ನೀಡಿದೆ...

Edited By :
PublicNext

PublicNext

02/02/2026 11:31 am

Cinque Terre

9.78 K

Cinque Terre

0

ಸಂಬಂಧಿತ ಸುದ್ದಿ