ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು:- ನಕಲಿ ಒಡವೆ ಗಿರವಿ ಇಟ್ಟ ಆರೋಪ!

ಮೈಸೂರು:- ನಕಲಿ ಒಡವೆಗಳನ್ನ ಗಿರವಿ ಇಟ್ಟು ಖಾಸಗಿ ಬ್ಯಾಂಕ್ ಗೆ ವಂಚಿಸಿದ ಆರೋಪದ ಮೇಲೆ ಚಿನ್ನಾಭರಣ ಮೌಲ್ಯಮಾಪಕ ಸೇರಿದಂತೆ 7 ಮಂದಿ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ತಮಿಳುನಾಡು ಮೂಲದ ಮರ್ಕೆಂಟೈಲ್ ಬ್ಯಾಂಕ್ ಗೆ ವಂಚಕರು 56.78 ಲಕ್ಷ ಉಂಡೆನಾಮ ಹಾಕಿದ್ದಾರೆ.

ಬ್ಯಾಂಕ್ ನ ಮುಖ್ಯಸ್ಥರಾದ ಸುರೇಶ್ ಕಣ್ಣನ್ ವಂಚನೆ ಪ್ರಕರಣ ದಾಖಲಿಸಿದ್ದಾರೆ.ಮೈಸೂರಿನ ಅಬ್ದುಲ್ ಜಮೀಲ್,ಮಂಡ್ಯದ ಸಾಗರ್,ಪುಟ್ಟರಾಜು,ರವಿಕುಮಾರ್,ಈತನ ಪತ್ನಿ ದಿವ್ಯ, ಬೆಂಗಳೂರಿನ ನಾಗರತ್ನರೆಡ್ಡಿ ಹಾಗೂ ಮೌಲ್ಯಮಾಪಕ ಟಿ.ನರಸೀಪುರದ ರವೀಂದ್ರ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

30/01/2026 12:36 pm

Cinque Terre

2.34 K

Cinque Terre

0

ಸಂಬಂಧಿತ ಸುದ್ದಿ