ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರಿಗೆ ಡ್ರಗ್ಸ್ ಭೂತ: ಡೆಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ!

ಮೈಸೂರು: ಮೈಸೂರಿನಲ್ಲಿ ಡ್ರಗ್ಸ್ ಉತ್ಪಾದನಾ ಘಟಕಗಳಿರುವ ಶಂಕೆಯ ಮೇರೆಗೆ ಡೆಲ್ಲಿ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ಈ ಗಂಭೀರ ಬೆಳವಣಿಗೆಯ ಬೆನ್ನಲ್ಲೇ, ಇಂದು ಮೇಟಗಳ್ಳಿ, ಹೆಬ್ಬಾಳ ಸೇರಿದಂತೆ ನಗರದ ಸುತ್ತಮುತ್ತಲಿನ ರಾಸಾಯನಿಕ ಕಾರ್ಖಾನೆಗಳ ಮೇಲೆ ಪೊಲೀಸರು ಶ್ವಾನ ದಳದೊಂದಿಗೆ ವ್ಯಾಪಕ ಪರಿಶೀಲನೆ ನಡೆಸಿದ್ದಾರೆ.

ರಾಸಾಯನಿಕ ಕಾರ್ಖಾನೆಗಳ ಪರಿಶೀಲನೆ

ಪರಿಶೀಲನೆ ವೇಳೆ, ಅಲ್ಲಿನ ರಾಸಾಯನಿಕ ವಸ್ತುಗಳು ಮತ್ತು ಇತರೆ ದಾಸ್ತಾನುಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ, ಕಾರ್ಖಾನೆ ಮಾಲೀಕರಿಗೆ ಕಠಿಣ ಎಚ್ಚರಿಕೆ ನೀಡಿದ ಪೊಲೀಸರು, ಕಾರ್ಖಾನೆಗಳಿಗೆ ಬರುವ ಕಚ್ಚಾ ವಸ್ತುಗಳು ಹಾಗೂ ಅನ್ಯರಾಜ್ಯದ ಕಾರ್ಮಿಕರ ಮೇಲೆ ಸೂಕ್ತ ಮತ್ತು ನಿರಂತರ ನಿಗಾ ವಹಿಸುವಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ.

Edited By : Vijay Kumar
PublicNext

PublicNext

31/01/2026 08:07 am

Cinque Terre

6.75 K

Cinque Terre

0

ಸಂಬಂಧಿತ ಸುದ್ದಿ