ಹೊಸಪೇಟೆ : ಭರತ ಹುಣ್ಣಿಮೆಯ ನಿಮಿತ್ತ ವಿಜಯನಗರ ಜಿಲ್ಲೆಯ ಶಕ್ತಿ ದೇವತೆಗಳ ದರ್ಶನವನ್ನ ಲಕ್ಷ, ಲಕ್ಷ ಭಕ್ತಾದಿಗಳು ಪಡೆದು ಪುನೀತರಾದರು. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ, ಹೊಸಪೇಟೆ ತಾಲೂಕಿನ ಗಾಳೇಮ್ಮ ದೇವಿ ಗುಡಿ ಸೇರಿದಂತೆ ಶಕ್ತಿ ದೇವತೆಗಳ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದವು. ಶಕ್ತಿ ದೇವತೆಗಳಿಗೆ ವಿಶೇಷ ಅಲಂಕಾರ, ಪೂಜೆ ಪುನಸ್ಕಾರ ಮಾಡಲಾಗಿತ್ತು. ಬೆಳಗ್ಗೆಯಿಂದಲೇ ಅಪಾರ ಭಕ್ತಗಣ ಶಕ್ತಿ ದೇವತೆಗಳ ದರ್ಶನ ಪಡೆದ್ರು. ಹೊಸಪೇಟೆ ತಾಲೂಕಿನ ಗಾಳೆಮ್ಮನ ಗುಡಿ ಹಂಪಿಗೆ ಹೋಗುವ ರಸ್ತೆ ಮಾರ್ಗದಲ್ಲೇ ಇದ್ದು ಸಂಚಾರ ನಿಯಂತ್ರಣಕ್ಕೆ ಹರಸಾಹಸರು ಹರಸಾಹಸ ಪಡುವ ವಾತಾವರಣ ನಿರ್ಮಾಣವಾಗಿತ್ತು.
PublicNext
02/02/2026 12:27 pm
LOADING...