ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಸಕರು, ಸಚಿವರು, ಜಿಲ್ಲಾಡಳಿತಕ್ಕೆ ಹತ್ತಾರು ಬಾರಿ ರಸ್ತೆ ನಿರ್ಮಾಣಕ್ಕೆ ಮನವಿ, ಯಾರೊಬ್ಬರೂ ಕ್ಯಾರೇ ಅಂತಿಲ್ಲ

ಹರಪನಹಳ್ಳಿ : ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಗಡಿ ಗ್ರಾಮಕ್ಕೆ ರಸ್ತೆ ಗ್ರಾಮಕ್ಕೆ ರಸ್ತೆಯೇ ಇಲ್ಲದಂತಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮುತ್ತಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರೋ ಪುಣ್ಯಾನಗರ ಗ್ರಾಮದ ಜನರ ಗೋಳಿನ ಕಥೆ ಕೇಳೋರೇ ಇಲ್ಲದಂತಾಗಿದೆ.

ಗ್ರಾಮೀಣ ಭಾಗದಲ್ಲಿ ರಸ್ತೆ, ನೀರು, ಮೂಲ ಸೌಕರ್ಯಕ್ಕಾಗಿ ರಾಜ್ಯ ಸರ್ಕಾರ ಕೋಟಿ, ಕೋಟಿ ಖರ್ಚು ಮಾಡುತ್ತೆ. ಆದ್ರೆ, ಕೇವಲ ಎರಡು ಕಿಮೀ ರಸ್ತೆಗಾಗಿ, ಡಿಸಿ, ಶಾಸಕರ ಬಳಿ ಅಲೆದಾಡಿದ್ರು ನ್ಯಾಯ ಸಿಗುತ್ತಿಲ್ಲ. ನಮಗೆ ಹಣ ಕೋಡೋದು ಬೇಡ, ಏನೂ ಬೇಡ, ಆದ್ರೆ ನಮಗೆ ರಸ್ತೆ ಮಾಡಿ ಕೊಡಿ ಅಂತ, ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದ್ರೂ ಉಪಯೋಗವಿಲ್ಲ ಅಂತ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

Edited By : Somashekar
PublicNext

PublicNext

21/01/2026 04:29 pm

Cinque Terre

20.36 K

Cinque Terre

0