ಚಾಮರಾಜನಗರ : ನಗರದಲ್ಲಿ ಆಯೋಜಿ ಸಿದ್ದ ಮಡಿವಾಳ ಮಾಚಿದೇವ ಜಯಂತಿಗೆ ನಿಗದಿತ ಅವಧಿಗೆ ಅಧಿಕಾರಿಗಳು, ಜನಪ್ರತಿ ನಿಧಿಗಳು ಆಗಮಿಸಿಲ್ಲ ಎಂದು ಮಡಿವಾಳ ಜನಾಂಗದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಯಂತಿ ಆಚರಣೆ ನಡೆಯಲಿದ್ದು 50 ಜನ ಮಾತ್ರ ಬನ್ನಿ ಎಂದು ಹೇಳಿದ್ದೀರ. ಆದರೆ, ಈಗ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರಕ್ಕೆ ಕಾರ್ಯಕ್ರಮವನ್ನು ವರ್ಗಾವಣೆ ಮಾಡಿದ್ದು, ಇಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಮೊದಲೇ ಹೇಳಿದ್ದರೆ ಹೆಚ್ಚಿನ ಜನರನ್ನು ಕರೆಸುತ್ತಿದ್ದೆವು. ಅಲ್ಲದೇ 11.45 ಆದರೂ ಇನ್ನೂ ಯಾರೂ ಬಂದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಅವರನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ರಾಜು ಮಾತನಾಡಿ, ಅಲ್ಲಿ ರಿಪೇರಿ ಕೆಲಸ ನಡೆಯುತ್ತಿರುವುದರಿಂದ ಇಲ್ಲಿಗೆ. ಜಯಂತಿ ಆಚರಣೆಗೆ ಎಂದು ಮನವಿ ಮಾಡಿದರು. ಬಳಿಕ ಜಯಂತಿ ಕಾರ್ಯಕ್ರಮ ನಡೆಯಿತು.
Kshetra Samachara
02/02/2026 05:03 pm
LOADING...