ಚಾಮರಾಜನಗರ : ರಾಜ್ಯದಲ್ಲಿ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ (ರೇಷನ್ ಕಾರ್ಡ್) ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್.ಕೃಷ್ಣ ಸ್ಪಷ್ಟಪಡಿಸಿದ್ದಾರೆ. ಅರ್ಹರಿಗೆ ಪಡಿತರ ಸೌಲಭ್ಯ ದೊರಕಿಸಿಕೊಡಲು ಹಾಗೂ ವಿತರಣಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಕರ್ನಾಟಕ ರಾಜ್ಯ ಆಹಾರ ಆಯೋಗ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ.
ಅರ್ಹರಿಗೆ ರೇಷನ್ ಕಾರ್ಡ್ ವಿತರಣೆ
ಅರ್ಹರಾಗಿರುವವರು ರೇಷನ್ ಕಾರ್ಡ್‌ನಿಂದ ವಂಚಿತರಾಗಿದ್ದರೆ ಅಥವಾ ಅವರ ಕಾರ್ಡ್ ರದ್ದಾಗಿದ್ದರೆ, ಕೂಡಲೇ ಅರ್ಜಿ ಸಲ್ಲಿಸಿ ಮರುಪಡೆದುಕೊಳ್ಳಬಹುದು. ಅರ್ಹರಿಗೆ ಮಾತ್ರ ರೇಷನ್ ಕಾರ್ಡ್ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ನ್ಯಾಯಬೆಲೆ ಅಂಗಡಿಗಳ ಮೇಲೆ ನಿಗಾ
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಕೃಷ್ಣ, ನ್ಯಾಯಬೆಲೆ ಅಂಗಡಿಗಳಲ್ಲಿ ತೂಕದಲ್ಲಿ ಮೋಸ ಅಥವಾ ಅಕ್ಕಿಯ ದುರ್ಬಳಕೆ ಕಂಡುಬಂದರೆ ಅಂತಹ ಅಂಗಡಿಗಳ ವಿರುದ್ಧ ದೂರು ನೀಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಬಯೋಮೆಟ್ರಿಕ್ ಅಥವಾ ಇಂಟರ್‌ನೆಟ್ ಸಮಸ್ಯೆಗಳಿಂದಾಗಿ ಪಡಿತರದಾರರಿಗೆ ಅಕ್ಕಿ ನೀಡದಿರುವ ಕುರಿತು ದೂರುಗಳು ಬಂದಿವೆ. ಆದರೆ, ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ನ್ಯಾಯಬೆಲೆ ಅಂಗಡಿಗಳು ಕಡ್ಡಾಯವಾಗಿ ಪಡಿತರ ನೀಡಬೇಕು ಹಾಗೂ ನಿಗದಿತ ಅವಧಿಯವರೆಗೆ ತೆರೆದಿರಬೇಕು ಎಂದು ಸೂಚಿಸಿದರು.
PublicNext
03/02/2026 04:33 pm
LOADING...