ಗುಂಡ್ಲುಪೇಟೆ : ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಮಾರಾಟ ಮಾಡಿ ತಿಂಗಳುಗಳೇ ಕಳೆದರೂ ಹಣ ಕೈ ಸೇರದ ಹಿನ್ನೆಲೆ ಕಚೇರಿಗೆ ಅಲೆದು ಸುಸ್ತಾದ ರೈತರೊಬ್ಬರು ಗುಂಡ್ಲುಪೇಟೆ ಎಪಿಎಂಸಿ ಕಚೇರಿ ಮುಂಭಾಗ ಧರಣಿ ನಡೆಸುತ್ತಿದ್ದಾರೆ.
ರೈತಾಪಿ ವರ್ಗಕ್ಕೆ ಅನುಕೂಲವಾಗಬೇಕಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಬೆಂಬಲ ಬೆಲೆ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಳ್ಳ ಹಿಡಿಯುತ್ತಿದಿಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ತಾಲೂಕಿನ ಹಕ್ಕಲಪುರ ಗ್ರಾಮದ ರೈತ ಸಿದ್ದಪ್ಪ ಎಂಬವರು ನವೆಂಬರ್ 21 - 2025 ರಲ್ಲಿಯೇ ಒಂಬತ್ತೂವರೆ ಕ್ವಿಂಟಾಲ್ ಸೂರ್ಯಕಾಂತಿಯನ್ನ ಗುಂಡ್ಲುಪೇಟೆ ಎಪಿಎಂಸಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ್ದರು , ಪ್ರತಿ ಕ್ವಿಂಟಾಲ್ಗೆ 7721 ರಂತೆ ಖರೀದಿ ಮಾಡಿದ್ದ ಅಧಿಕಾರಿಗಳು ಹಣ ನೀಡದೆ ಸತಾಯಿಸುತ್ತಿದ್ದರಿಂದ ಬೇಸತ್ತ ರೈತರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ನನಗೆ 73349 ರೂ ಹಣ ಬರಬೇಕು ಆದರೆ ಅಧಿಕಾರಿಗಳಾಗಲಿ ಎಪಿಎಂಸಿ ಅಧ್ಯಕ್ಷರಾಗಲಿ ಸ್ಪಂದನೆ ನೀಡುತ್ತಿಲ್ಲ , ಸೂರ್ಯಕಾಂತಿ ಖರೀದಿಸಿ ಮೂರು ತಿಂಗಳುಗಳೇ ಗತಿಸಿವೆ ಆದರೆ ನಮ್ಮ ಹಣವನ್ನ ನೀಡಲು ಮೀನಾಮೇಷ ಎಣಿಸಲಾಗುತ್ತಿದೆ ಎಂದು ರೈತ ಆರೋಪಿಸಿದ್ದಾರೆ. ಕಷ್ಟಪಟ್ಟು ಬೇಸಾಯ ಮಾಡಿ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತೆ ಅಂತ ಮಾರುಕಟ್ಟೆಯಲ್ಲಿನ ಖರೀದಿ ಕೇಂದ್ರಕ್ಕೆ ತಂದ್ರೆ ಈ ರೀತಿಯಾಗಿ ಸತಾಯಿಸುತ್ತಾರೆ, ರೈತನ ಸಂಕಷ್ಟ ಅರಿಯದ ಅಧಿಕಾರಿಗಳಿಂದ ನೊಂದು ರೋಷಿಹೋಗಿರುವ ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತೆ ಅಂತ ಆಕ್ರೋಶ ಹೊರಹಾಕಿದ್ದಾರೆ.
PublicNext
02/02/2026 08:46 pm
LOADING...