ಚಿಕ್ಕಮಗಳೂರು: ಮೆಟ್ರಿಕ್ ಪೂರ್ವ ಗಿರಿಜನ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ 'ಆರಕ್ಷಕ ಗೆಳತಿ' ಯೋಜನೆಯಡಿ ಡಿ.ಸಿ.ಆರ್.ಬಿ ಘಟಕದ ಪಿ.ಎಸ್.ಐ ಅವರು ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಕುಂದುಕೊರತೆಗಳನ್ನು ಆತ್ಮೀಯವಾಗಿ ಆಲಿಸಿದ ಅಧಿಕಾರಿಗಳು, ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಇರುವ 'ಅಕ್ಕಪಡೆ'ಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.
ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿನಿಯರು ಸೈಬರ್ ಅಪರಾಧಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸುವ ಕುರಿತು ಮತ್ತು ಪೋಕ್ಸೋ (POCSO) ಕಾಯ್ದೆಯಡಿ ಲಭ್ಯವಿರುವ ಕಾನೂನು ರಕ್ಷಣೆಯ ಬಗ್ಗೆ ಸವಿಸ್ತಾರವಾಗಿ ಅರಿವು ಮೂಡಿಸಿದರು. ಇದರೊಂದಿಗೆ ದೈನಂದಿನ ಜೀವನದಲ್ಲಿ ಪಾಲಿಸಬೇಕಾದ ಸಂಚಾರಿ ನಿಯಮಗಳ ಮಹತ್ವವನ್ನು ವಿದ್ಯಾರ್ಥಿನಿಯರಿಗೆ ತಿಳಿಸಿಕೊಡಲಾಯಿತು.
Kshetra Samachara
02/02/2026 07:26 pm
LOADING...