ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಶಾಲಾ-ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ಜಾಗೃತಿಗೆ ಸಜ್ಜಾದ ಚಾಲನಾ ತರಬೇತಿ ಶಾಲೆಗಳ ಸಂಘ

ಚಿಕ್ಕಮಗಳೂರು : ಜಿಲ್ಲಾ ಕೇಂದ್ರದಲ್ಲಿ ವೈಜ್ಞಾನಿಕ ಹಾಗೂ ಸುಸಜ್ಜಿತವಾದ ಚಾಲನಾ ಪರೀಕ್ಷಾ ಪಥವನ್ನು ನಿರ್ಮಿಸಬೇಕೆಂದು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಜಿಲ್ಲೆಯಲ್ಲಿ ಸದ್ಯ 42 ಸರ್ಕಾರಿ ಮಾನ್ಯತೆ ಪಡೆದ ಚಾಲನಾ ಶಾಲೆಗಳಿದ್ದರೂ, ಸರಿಯಾದ ಟ್ರ್ಯಾಕ್ ಇಲ್ಲದ ಕಾರಣ ತರಬೇತಿಗೆ ತೊಂದರೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಸುಸಜ್ಜಿತ ಟ್ರ್ಯಾಕ್ ನಿರ್ಮಾಣಕ್ಕಾಗಿ ಹೋರಾಟ ನಡೆಸಲು ಸಂಘ ನಿರ್ಧರಿಸಿದೆ. ​ಕೇವಲ ವೃತ್ತಿಪರ ತರಬೇತಿಗೆ ಸೀಮಿತವಾಗದ ಈ ಸಂಘವು ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಯೋಜನೆ ರೂಪಿಸಿದೆ. ಇದರೊಂದಿಗೆ ಸಾರ್ವಜನಿಕ ಸೇವೆಯ ಅಂಗವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಸಂಘ ಮುಂದಾಗಿದೆ.

​ಚಾಲನಾ ತರಬೇತಿಯ ಗುಣಮಟ್ಟವನ್ನು ಹೆಚ್ಚಿಸಲು ಸಂಘವು ವಿಶೇಷ ಗಮನ ಹರಿಸಿದ್ದು, ಎಲ್ಲಾ ತರಬೇತಿ ಶಾಲೆಗಳಿಗೆ ಅಗತ್ಯ ಮಾರ್ಗದರ್ಶನ ನೀಡಲು ನಿರ್ಧರಿಸಿದೆ. ಸಂಘದ ನೂತನ ಅಧ್ಯಕ್ಷರಾಗಿ ಡಿ.ಟಿ. ಮಂಜುನಾಥ್, ಉಪಾಧ್ಯಕ್ಷರಾಗಿ ತೀರ್ಥಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್, ಕಾರ್ಯಾಧ್ಯಕ್ಷರಾಗಿ ಸುಧೀರ್, ಸಹಕಾರ್ಯದರ್ಶಿಯಾಗಿ ಇನಾಯತ್, ಖಜಾಂಚಿಯಾಗಿ ಜಯಲಕ್ಷ್ಮಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಅನಿಲ್ ಕುಮಾರ್, ಸತ್ಯನಾಥ್, ನೂರುಲ್ಲಾ ಖಾನ್ ಹಾಗೂ ಬಲರಾಮ್ ನಾಯಕ್ ಅವರು ಸಂಘದ ಆಶಯಗಳನ್ನು ಜಾರಿಗೊಳಿಸಲು ಸನ್ನದ್ಧರಾಗಿದ್ದಾರೆ.

Edited By : PublicNext Desk
PublicNext

PublicNext

03/02/2026 07:22 pm

Cinque Terre

5.96 K

Cinque Terre

0

ಸಂಬಂಧಿತ ಸುದ್ದಿ