ಚಿಕ್ಕಮಗಳೂರು: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಪೊಲೀಸ್ ಸಿಬ್ಬಂದಿಗೆ ಮುಂಬಡ್ತಿ ಲಭಿಸಿದ್ದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಧೀಕ್ಷಕರಾದ ಜಿತೇಂದ್ರ ಕುಮಾರ್ ದಯಾಮ ಅವರು ಪದೋನ್ನತಿ ಹೊಂದಿದ ಅಧಿಕಾರಿಗಳಿಗೆ ಸಿಹಿ ನೀಡಿ ಶುಭ ಹಾರೈಸಿದರು.
ಸಿಹೆಚ್‌ಸಿ (CHC) ಹುದ್ದೆಯಿಂದ ಎಎಸ್‌ಐ (ASI) ಹುದ್ದೆಗೆ ಮುಂಬಡ್ತಿ ಪಡೆದ ಶಿವಾನಂದ ಬಿ.ಕೆ. ಹಾಗೂ ಡಬ್ಲ್ಯೂಪಿಸಿ (WPC) ಹುದ್ದೆಯಿಂದ ಡಬ್ಲ್ಯೂಹೆಚ್‌ಸಿ ಹುದ್ದೆಗೆ ಮುಂಬಡ್ತಿ ಹೊಂದಿದ ಶ್ರೀಮತಿ ರೇಖಾ ಬಿ.ಎಸ್. ಅವರಿಗೆ ಎಸ್ಪಿಯವರು ನೂತನ ಹುದ್ದೆಯ ಜವಾಬ್ದಾರಿಯನ್ನು ಹಸ್ತಾಂತರಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದು, ಮುಂಬಡ್ತಿ ಹೊಂದಿದ ಸಹೋದ್ಯೋಗಿಗಳಿಗೆ ಶುಭಾಶಯ ಕೋರಿದರು.
PublicNext
03/02/2026 07:41 pm
LOADING...