ಕಡೂರು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ 55 ಗ್ರಾಮ ಪಂಚಾಯಿತಿಗಳ ಸದಸ್ಯರ ಅಧಿಕಾರಾವಧಿ ಫೆಬ್ರವರಿ 3ರೊಳಗೆ ಅಂತ್ಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಎನ್. ಎಂ. ನಾಗರಾಜ್ ಅವರು ಈ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕಿನ ಒಟ್ಟು 60 ಗ್ರಾಮ ಪಂಚಾಯಿತಿಗಳ ಪೈಕಿ ಈ 55 ಪಂಚಾಯಿತಿಗಳ ಆಡಳಿತ ನಿರ್ವಹಣೆಗೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ನಿಯೋಜಿಸಲಾಗಿದೆ. ಅಕ್ಷರ ದಾಸೋಹ, ಎಪಿಎಂಸಿ, ಪಂಚಾಯತ್ ರಾಜ್ ಇಂಜಿನಿಯರಿಂಗ್, ಅರಣ್ಯ ಇಲಾಖೆ, ತೋಟಗಾರಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಜಿಲ್ಲೆಯಲ್ಲಿ ಹಂತ ಹಂತವಾಗಿ ಪಂಚಾಯಿತಿಗಳ ಅವಧಿ ಮುಗಿಯುತ್ತಿದ್ದು, ಅಧಿಕಾರಾವಧಿ ಪೂರ್ಣಗೊಂಡ ಕೂಡಲೇ ಆಡಳಿತಾಧಿಕಾರಿಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೆಲವು ಪಂಚಾಯಿತಿಗಳಿಗೆ ಆಗಸ್ಟ್ ತಿಂಗಳವರೆಗೆ ಮಾತ್ರ ಈ ಅವಕಾಶವಿರಲಿದ್ದು, ಚುನಾವಣೆ ಯಾವಾಗ ನಡೆಯಬಹುದು ಎಂಬ ಕುತೂಹಲ ಈಗ ಆಕಾಂಕ್ಷಿಗಳಲ್ಲಿ ಮನೆಮಾಡಿದೆ.
Kshetra Samachara
01/02/2026 05:15 pm
LOADING...