ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು : ಸುಪ್ರೀಂ ಆದೇಶ ಉಲ್ಲಂಘನೆ ಆರೋಪ ದತ್ತಪೀಠದ ಗುಹೆಯೊಳಗೆ ಹೊಸ ಆಚರಣೆ, ಹಿಂದೂ ಸಂಘಟನೆಗಳ ಆಕ್ರೋಶ!

ಚಿಕ್ಕಮಗಳೂರು : ವಿವಾದಿತ ದತ್ತಪೀಠದ ವಿವಾದವು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ ದತ್ತಪೀಠದ ಗುಹೆಯೊಳಗೆ ಹೊಸ ಆಚರಣೆಗಳನ್ನು ನಡೆಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕಳೆದ ಜನವರಿ 23ರಂದು ಗುಹೆಯ ಒಳಭಾಗದಲ್ಲಿ ಹೊಸದಾಗಿ 'ಕಲಮೆ ತಯ್ಯಬಾ' ಆಚರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಇದು ಈಗ ಸಂಘರ್ಷಕ್ಕೆ ಕಾರಣವಾಗಿದೆ. ದತ್ತಪೀಠದ ವ್ಯವಸ್ಥಾಪನಾ ಸಮಿತಿಯ ಅವಧಿ ಮುಗಿಯುತ್ತಿದ್ದಂತೆಯೇ ಇಂತಹ ಹೊಸ ಆಚರಣೆಗಳಿಗೆ ಅವಕಾಶ ನೀಡಲಾಗಿದೆ ಎಂದು ಜಿಲ್ಲಾಡಳಿತದ ವಿರುದ್ಧ ವಿ.ಎಚ್.ಪಿ ಮತ್ತು ಬಜರಂಗದಳದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಂಘಟನೆಗಳ ಮುಖಂಡರು ಜಿಲ್ಲಾಡಳಿತದ ದ್ವಂದ್ವ ನೀತಿಯನ್ನು ಪ್ರಶ್ನಿಸಿದ್ದಾರೆ. ನಮಗೆ ಗುಹೆಯ ಮುಂಭಾಗದಲ್ಲಿ ಹೋಮ ಮಾಡಲು ಅವಕಾಶ ನೀಡದ ಜಿಲ್ಲಾಡಳಿತ, ಪಕ್ಕದ ಶೆಡ್‌ನಲ್ಲಿ ಕಾರ್ಯಕ್ರಮ ನಡೆಸುವಂತೆ ಸೂಚಿಸಿತ್ತು. ಆದರೆ ಈಗ ಗುಹೆಯ ಒಳಭಾಗದಲ್ಲಿ ಕಲಮೆ ತಯ್ಯಬಾ ಮಾಡಲು ಹೇಗೆ ಮತ್ತು ಯಾರ ಅನುಮತಿಯೊಂದಿಗೆ ಅವಕಾಶ ನೀಡಲಾಯಿತು ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮುಜಾವರ್‌ಗಳ ನೇಮಕಾತಿ ಮತ್ತು ಅರ್ಹತೆಯ ಬಗ್ಗೆಯೂ ಹೊಸ ವಾದ ಮುನ್ನೆಲೆಗೆ ಬಂದಿದೆ. ಎಂಡೋಮೆಂಟ್ ಕಮಿಷನರ್ ನ್ಯಾಯಾಲಯದಲ್ಲಿ ಈ ಹಿಂದೆ ಸಯ್ಯದ್ ಪಿರ್ ಮೊಹಮ್ಮದ್ ಶಾಖಾದ್ರಿಯವರು ನೀಡಿದ್ದ ಹೇಳಿಕೆಯಂತೆ, ಪೂಜೆ ಮಾಡುವವರು 25 ವರ್ಷಕ್ಕಿಂತ ಹೆಚ್ಚು ಅವಧಿಗೆ ಪೂಜೆ ಮಾಡುವಂತಿಲ್ಲ ಮತ್ತು ಅವರು ಅವಿವಾಹಿತರಾಗಿರಬೇಕು. ಆದರೆ ಸದ್ಯ ದತ್ತಪೀಠದಲ್ಲಿರುವ ಮೂವರು ಮುಜಾವರ್‌ಗಳು ಕಳೆದ 35 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರಿಗೂ ಮದುವೆಯಾಗಿ ಮಕ್ಕಳು ಮತ್ತು ಮೊಮ್ಮಕ್ಕಳಿದ್ದಾರೆ. ಇದಕ್ಕೆ ವಿರುದ್ಧವಾಗಿ ಈಗ ಪೂಜೆ ಮಾಡುತ್ತಿರುವ ಹಿಂದೂ ಯುವಕರು ಅವಿವಾಹಿತರಾಗಿದ್ದಾರೆ. ಆದ್ದರಿಂದ ಸಯ್ಯದ್ ಪಿರ್ ಮೊಹಮ್ಮದ್ ಶಾಖಾದ್ರಿಯವರ ಹೇಳಿಕೆಯ ಅನ್ವಯ, ಹಾಲಿ ಇರುವ ಮುಜಾವರ್‌ಗಳನ್ನು ಕೂಡಲೇ ಬದಲಾಯಿಸಬೇಕು ಎಂದು ಆಗ್ರಹಿಸಿ ವಿ.ಎಚ್.ಪಿ. ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ

Edited By :
PublicNext

PublicNext

04/02/2026 03:03 pm

Cinque Terre

3.47 K

Cinque Terre

0

ಸಂಬಂಧಿತ ಸುದ್ದಿ