ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ: 03-02-2026

ಮೇಷ: ನಡೆನುಡಿಗಳಲ್ಲಿ ನಾಜೂಕುತನದಿಂದ ಕಾರ್ಯಸಾಧನೆ. ಸರಕಾರಿ ಉದ್ಯೋಗಸ್ಥರಿಗೆ ಸವಾಲಿನ ಸನ್ನಿವೇಶ. ಸಣ್ಣ ಉದ್ಯಮಿಗಳಿಗೆ ಸಮಾಧಾನ. ಮಕ್ಕಳಿಗೆ ಕಲಿಕೆಯಲ್ಲಿ ಉತ್ಸಾಹ ವೃದ್ಧಿ. ಕೆಲವು ವರ್ಗದ ವ್ಯಾಪಾರಿಗಳಿಗೆ ಲಾಭ.

ವೃಷಭ: ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ವಾಹನ ದುರಸ್ತಿ ಮಾಡುವವರಿಗೆ ಅನುಕೂಲದ ದಿನ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಹಿರಿಯ ಮಹಿಳೆಯರ ಆರೋಗ್ಯ ಸುಧಾರಣೆ.

ಮಿಥುನ: ಅಪಾರ ಲಾಭ ಆಗದಿದ್ದರೂ ನಷ್ಟ ಇಲ್ಲ. ಹಳೆಯ ಗೆಳೆಯ ಮತ್ತೆ ಸಂಪರ್ಕಕ್ಕೆ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ಆರೋಗ್ಯ ವೃದ್ಧಿಯಿಂದ ನೆಮ್ಮದಿ. ಸಮಾಜ ಸೇವೆಯಿಂದ ಮನಸ್ಸಂತೋಷ.

ಕರ್ಕಾಟಕ: ಕೆಲಸ ಕಾರ್ಯಗಳ ವೇಗ ವರ್ಧನೆ. ಉದ್ಯೋಗಸ್ಥರಲ್ಲಿ ಕೆಲವರಿಗೆ ಸ್ಥಾನ ಬದಲಾವಣೆ. ಉದ್ಯಮಿಗಳಿಂದ ಹೊಸ ಕ್ಷೇತ್ರ ಅನ್ವೇಷಣೆ. ಮಹಿಳೆಯರ ಸೋದ್ಯೋಗ ಯೋಜನೆಗಳಿಗೆ ಕೀರ್ತಿ.ಅನಿವಾರ್ಯವಾಗುವ ಪ್ರಯಾಣ.

ಸಿಂಹ: ಉದ್ಯೋಗಸ್ಥರಿಗೆ ಹೆಚ್ಚು ದುಡಿಯಲು ಉತ್ತೇಜನ. ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಆರಂಭ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಕುಟುಂಬದ ಸದಸ್ಯರ ಉತ್ತಮ ಸಹಕಾರ.

ಕನ್ಯಾ: ಉದ್ಯೋಗಸ್ಥ ಮಹಿಳೆಯರ ಪಾಲಿಗೆ ಶುಭದಿನ. ಸಣ್ಣ ಉದ್ಯಮ ಘಟಕದ ಪ್ರಗತಿಗೆ ಸವಾಲುಗಳು. ಅವಿವಾಹಿತ ಮಕ್ಕಳಿಗೆ ವಿವಾಹದ ಸೂಚನೆ. ದೂರದೇಶದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ.

ತುಲಾ: ಮಕ್ಕಳ ಕ್ಷೇಮಚಿಂತನೆಗೆ ಕಾಲವ್ಯಯ. ಉತ್ಪಾದನಾ ಕ್ಷೇತ್ರದಲ್ಲಿ ಪೈಪೋಟಿ ಶಮನ. ಉದ್ಯೋಗಾಪೇಕ್ಷಿಗಳಿಗೆ ಅನುಕೂಲ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಮಧ್ಯವಯಸ್ಕರ ಆರೋಗ್ಯದ ಕಡೆಗೆ ಗಮನ ಇರಲಿ.

ವೃಶ್ಚಿಕ: ಸದ್ಯೋಭವಿಷ್ಯದಲ್ಲಿ ಶುಭ ಘಟನೆಯ ಸೂಚನೆ. ಉದ್ಯೋಗಸ್ಥರಿಗೆ ಒಂದು ಬಗೆಯ ನಿಶ್ಚಿಂತೆ. ಸರಕಾರಿ ಅಧಿಕಾರಿಗಳಿಗೆ ಕೊಂಚ ಕಿರಿಕಿರಿ. ರಾಜಕಾರಣಿಗಳಿಗೆ ಅನಿಶ್ಚಿತ ಪರಿಸ್ಥಿತಿ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ.

ಧನು: ಎಡೆಬಿಡದ ಪ್ರಯತ್ನದಿಂದ ವಾತಾವರಣ ಶುದ್ದಿ. ಉದ್ಯಮದ ವೈವಿಧ್ಯಕರಣ ಯೋಜನೆ ಸಫಲ. ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಸಹಾಯ. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ಆರೋಗ್ಯ ಕಾರ್ಯಕರ್ತರಿಗೆ ಕೆಲಸದ ಒತ್ತಡ.

ಮಕರ: ಉದ್ಯೋಗಸ್ಥರಿಗೆ ದಿನಕ್ಕೊಂದು ಬಗೆಯ ಕೆಲಸ. ಉದ್ಯಮಿಗಳಿಗೆ ಹಠಾತ್ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲದ ವಾತಾವರಣ. ಹಿರಿಯರನ್ನು ಸಮ್ಮಾನಿಸುವ ಅವಕಾಶ ಪ್ರಾಪ್ತಿ.ಗೆಳೆಯರಿಂದ ಸಕಾಲಿಕ ಸಹಾಯ.

ಕುಂಭ: ತ್ವರಿತ ಗತಿಯಲ್ಲಿ ಸಾಗುವ ಕೆಲಸ, ಕಾರ್ಯಗಳು ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ.ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಸಂಗೀತ, ನೃತ್ಯಾದಿ ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ.

ಮೀನ: ಪ್ರೋತ್ಸಾಹಕ ವಾತಾವರಣ ಕಾಣಿಸದಿದ್ದರೂ ಕಾರ್ಯದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಇಲಾಖೆಗಳವರಿಂದ ಉತ್ತಮ ಸಹಕಾರ. ಆವಶ್ಯಕತೆ ಉಳ್ಳವರಿಗೆ ಸಹಾಯ ಮಾಡುವ ಅವಕಾಶ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.

Edited By : Vijay Kumar
PublicNext

PublicNext

03/02/2026 07:57 am

Cinque Terre

11.01 K

Cinque Terre

0