ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಜಕೀಯ ನಾಯಕರ ಮುಂದೆ ಗ್ಲಾಮರಸ್ ಆಗಿ ಓಡಾಡಬೇಡಿ - ಕಾಂಗ್ರೆಸ್ ನಾಯಕಿ ಮೋಟಮ್ಮ

ಮಂಗಳೂರು: "ಎಲ್ಲ ರಾಜಕೀಯ ಪಕ್ಷಗಳೂ ಮಹಿಳೆಯರನ್ನು ಕಡೆಗಣಿಸುತ್ತಿದ್ದು, ಕೇವಲ ಸಾಂಬಾರ್‌ಗೆ ಪರಿಮಳ ತುಂಬುವ ಕರಿಬೇವಿನಂತೆ ಬಳಸಿಕೊಳ್ಳುತ್ತಿವೆ. ಮಹಿಳೆಯರು ಗ್ಲಾಮರಸ್ ಆಗಿ ಕಾಣಿಸಿಕೊಂಡು ನಾಯಕರ ಹಿಂದೆ ಓಡಾಡುವುದನ್ನು ನಿಲ್ಲಿಸಿ, ಪಕ್ಷಭೇದ ಮರೆತು ಹೋರಾಡಬೇಕು" ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಕರೆ ನೀಡಿದ್ದಾರೆ.

ನಗರದಲ್ಲಿ ಭಾನುವಾರ ನಡೆದ ಮಹಿಳಾ ಮಂಡಲಗಳ ಒಕ್ಕೂಟದ ಸಮಾವೇಶದಲ್ಲಿ 'ರಾಜಕೀಯದಲ್ಲಿ ಮಹಿಳೆ' ವಿಷಯದ ಕುರಿತು ಮಾತನಾಡಿದ ಅವರು, ಮಹಿಳಾ ರಾಜಕಾರಣಿಗಳು ನಾಯಕರ ಮುಂದೆ ಹಲ್ಲು ಕಿರಿದು ನಿಲ್ಲುವುದನ್ನು ಬಿಡಬೇಕು ಎಂದು ಒತ್ತಿ ಹೇಳಿದರು. ಅಲ್ಲದೆ, ಸ್ವಂತ ಕಾಲ ಮೇಲೆ ನಿಂತು ಕೆಲಸ ಮಾಡುವ ಮೂಲಕ ನಾಯಕರು ತಮ್ಮ ಬಳಿ ಸಹಾಯ ಕೇಳುವಂತಹ ಪ್ರಬಲ ಸ್ಥಾನವನ್ನು ತಲುಪಬೇಕು ಎಂದು ಮೋಟಮ್ಮ ಆಶಯ ವ್ಯಕ್ತಪಡಿಸಿದರು.

Edited By : Somashekar
PublicNext

PublicNext

03/02/2026 12:47 pm

Cinque Terre

12.82 K

Cinque Terre

0

ಸಂಬಂಧಿತ ಸುದ್ದಿ