ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ, ಸಮಸ್ಯೆಗಳಿಗೂ ಕೊನೆಯಿಲ್ಲ!

ಇದೇ ವಾರ್ಡ್ ನಲ್ಲಿರೋ ಕಾಳೀದಾಸ ಲೇಔಟ್, ಕಲ್ಲಪ್ಪ ಬ್ಲಾಕ್, ಎಸ್.ಬಿ.ಎಂ ಕಾಲೊನಿ ಮತ್ತು ಬನಶಂಕರಿ1st ಸ್ಟೇಜ್ ಗಳ ಕತೆಯೂ ಇದಕ್ಕೆ ಹೊರತಾಗಿಲ್ಲ. ಕಸ, ಚರಂಡಿ, ರಸ್ತೆ ಗುಂಡಿಯಂಥ ಸಮಸ್ಯೆಗಳೇ ಜಾಸ್ತಿ. ಮತ್ತೆ ಕೆಲ ಬಡಾವಣೆಗಳಲ್ಲಿ ಬೇಸಿಗೆಗೂ ಮುನ್ನವೇ ಕುಡಿವ ನೀರಿನ ಸಮಸ್ಯೆ ಶುರುವಾಗಿದೆ ಎಂದು ಹೇಳಲಾಗುತ್ತೆ. ಈ ಹಿಂದೆ ಶ್ರೀನಗರ ವಾರ್ಡ್ ನ ಕಾರ್ಪೊರೇಟರ್ ಆಗಿದ್ದ ಸವಿತಾ ಮಾಯಣ್ಣವರ್ ಅವರನ್ನು ಮತ್ತು ವಾರ್ಡ್ ಗಾಗಿ ಅವರು ಮಾಡಿದಂಥ ಕೆಲಸವನ್ನು ಇಲ್ಲಿನ ಕೆಲವರು ಸ್ಮರಿಸುವುದುಂಟು. ಆದರೆ, ಈಗಿನ ಜಿಬಿಎಗೆ ಚುನಾವಣೆ ನಡೆದು ಮತ್ತೆ ಈ ವಾರ್ಡ್ ಗೆ ಯಾರೋ ಒಬ್ಬರು ಕಾರ್ಪೋರೆಟರ್ ಆಗಿ ಬರುವವರೆಗೂ ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳೋಣ? ಅನ್ನೋ ಇಲ್ಲಿನ ಮುಗ್ಧ ನಿವಾಸಿಗಳ ಪ್ರಶ್ನೆಗೆ ನಮ್ಮ ಬಳಿಯೂ ಉತ್ತರವಿಲ್ಲ.

ಚೆನ್ನವೀರ ಸಗರನಾಳ್ ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.

Edited By :
PublicNext

PublicNext

03/02/2026 06:46 pm

Cinque Terre

7.24 K

Cinque Terre

0

ಸಂಬಂಧಿತ ಸುದ್ದಿ