ವಿಧಾನಸೌಧ: ಇವತ್ತು ನಿಮ್ಮ ಕೆಲಸವೇನಾದರೂ ಆಗಬೇಕೆಂದರೆ ಸಿಎಂ ಸಿದ್ದರಾಮಯ್ಯ ಅವರ "ಕುರುಬರ ಗ್ಯಾಂಗ್" ಅನ್ನು ಕರೆದುಕೊಂಡು ಹೋಗಬೇಕು! ಇನ್ನು ಸಚಿವ ಚಲುವರಾಯಸ್ವಾಮಿ ಅವರ ಬಳಿ ಕೆಲಸವೇನಾದರೂ ಇದ್ದರೆ "ಗೌಡರ ಗ್ಯಾಂಗ್" ಅನ್ನು ಕರೆದುಕೊಂಡು ಹೋಗಬೇಕು! ಹೀಗೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಇಂದು ವಿಧಾನಸಭೆ ಅಧಿವೇಶನದಲ್ಲಿ ಹೇಳಿದರು. ಪ್ರಶ್ನೋತ್ತರ ಕಲಾಪದ ವೇಳೆ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಸಚಿವ ತಿಮ್ಮಾಪುರ ಅವರು ಕೂಡಲೇ ರಾಜೀನಾಮೆ ಕೊಡಬೇಕೆಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು. ಈ ವೇಳೆ ಆಡಳಿತರೂಢ ಶಾಸಕರು ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಮಂಡ್ಯ ಜಿಲ್ಲೆಯ ಅಬಕಾರಿ ಡಿಸಿ ನಾಗಶೈನ್ ಅವರು ಮಾತನಾಡಿದ್ದಾರೆನ್ನಲಾದ 'ಜಾತಿ ವಿಚಾರ' ಕುರಿತಾದ ದೂರವಾಣಿ ಸಂಭಾಷಣೆಯನ್ನು ಸದನದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟರು.
PublicNext
03/02/2026 10:56 pm
LOADING...