ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಗಮನಸೆಳೆದ ವಿಜ್ಞಾನ ವಸ್ತು ಪ್ರದರ್ಶನ

ಹಾವೇರಿಯ ಸರ್ ಎಂ ವಿಶ್ವೇಶ್ವರಯ್ಯ ಶಾಲೆಯಲ್ಲಿ ಮಂಗಳವಾರ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ವಿಜ್ಞಾನ ಪ್ರದರ್ಶನದಲ್ಲಿ ಶಾಲೆಯ 60 ಅಧಿಕ ಪ್ರಾತ್ಯಕ್ಷಿಕೆಗಳ ಪ್ರದರ್ಶನ ಮಾಡಿದರು. 6 ನೇ ತರಗತಿಯಿಂದ 9 ನೇ ತರಗತಿಯವರೆಗೆ ಸುಮಾರು 100 ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.

10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ದೃಷ್ಟಿಯಿಂದ ಸಿರಿಧಾನ್ಯ ಮತ್ತು ಇತರ ಕಾಳುಗಳನ್ನು ಬಳಸಿ ಮಾನವ ದೇಹದ ವಿವಿಧ ಭಾಗಗಳನ್ನು ಅನಾವರಣಗೊಳಿಸಿದರು. ಕಣ್ಣು ಮೆದುಳು ಸೇರಿದಂತೆ ವಿವಿಧ ಅಂಗಾಂಗಗಳು ನವಧಾನ್ಯಗಳಲ್ಲಿ ಸುಂದರವಾಗಿ ಮಾಡಲ್ಪಟ್ಟಿದ್ದವು.

6 ರಿಂದ 9 ನೇ ತರಗತಿಯವರೆಗೆ ವಿದ್ಯಾರ್ಥಿಗಳು ವಿವಿಧ ಪ್ರಾತ್ಯಕ್ಷಿಕೆಗಳನ್ನು ತಯಾರಿಸಿಕೊಂಡು ಬಂದಿದ್ದರು. ವಿಂಡಪವರ್,ಥರ್ಮಲ್ ಪವರ್ ಸಮುದ್ರ ಅಲೆಗಳಿಂದ ಶಕ್ತಿ ಉತ್ಪಾದನೆ ಸೇರಿದಂತೆ ವಿವಿಧ ವಿಜ್ಞಾನದ ಪ್ರಯೋಗಗಳನ್ನು ಮಾಡಿಕೊಂಡು ಬಂದು ಪ್ರದರ್ಶಿಸಿದರು.

Edited By : Vinayak Patil
Kshetra Samachara

Kshetra Samachara

03/02/2026 08:58 pm

Cinque Terre

580

Cinque Terre

0