ಹಾವೇರಿ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಹಾವೇರಿ ಜಿಲ್ಲೆ ಸವಣೂರು ಕ್ಷೇತ್ರ ಶಿಕ್ಷಣಾಧಿಕಾರಿ M.F ಬಾರ್ಕಿ ವಿಭಿನ್ನ ಪ್ಲಾನ್ ಮಾಡಿದ್ದಾರೆ.
ಸವಣೂರು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಎರಡು ಗಂಟೆ ಮೊಬೈಲ್ ಸ್ವಿಚ್ ಆಫ್ ವಿಶೇಷ ಅಭಿಯಾನದ ಆದೇಶವನ್ನ ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ್ದಾರೆ. ಪೋಷಕರು ಮನೆಯಲ್ಲಿ ಟಿವಿ ಮತ್ತು ಮೊಬೈಲ್ ಬಂದ್ ಮಾಡಿ ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕು ಎಂದು ಬಿಇಓ ಎಂ.ಎಫ್ ಬಾರ್ಕಿ ಮನವಿ ಮಾಡಿದ್ದಾರೆ.
ಸವಣೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಸಂಜೆ 7 ರಿಂದ 9 ಗಂಟೆಯವರೆಗೆ ಮನೆಯಲ್ಲಿನ ಮೊಬೈಲ್ ಮತ್ತು ಟಿವಿ ಗಳನ್ನ ಸ್ವಿಚ್ ಆಫ್ ಮಾಡುವಂತೆ ಮನವಿ ಮಾಡಿದ್ದಾರೆ. ಸವಣೂರು ತಾಲೂಕು ಪಂಚಾಯತ್ ಟಿಇಓಗೆ ಬಿಇಓ m f ಬಾರ್ಕಿ ಮನವಿ ಮಾಡಿದ್ದಾರೆ.ಗ್ರಾಮ ಪಂಚಾಯಿತಿ ಪಿಡಿಓಗಳು ಊರುಗಳಲ್ಲಿ ಡಂಗುರ ಸಾರಿಸಿ SSLC ಮಕ್ಕಳ ಫಲಿತಾಂಶ ಸುಧಾರಣೆ ಸಹಕರಿಸಲು ಬಿಇಓ ಮನವಿ ಮಾಡಿದ್ದಾರೆ.
Kshetra Samachara
31/01/2026 10:39 pm
LOADING...