ಹಾವೇರಿ: ಹಾವೇರಿ ಜಿಲ್ಲಾ ಕೇಂದ್ರದ ಬಸ್ ನಿಲ್ದಾಣದ ಬಳಿ ಇರುವ ಗೂಗಿಕಟ್ಟೆಯಲ್ಲಿ ಸುಮಾರು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೈಟೆಕ್ ರಂಗಮಂದಿರವು ನಾಲ್ಕು ವರ್ಷಗಳಿಂದ ಕಾರ್ಯಾರಂಭ ಮಾಡದೆ ನಿಷ್ಪ್ರಯೋಜಕವಾಗಿದೆ.
ಉದ್ಘಾಟನೆಯಾದರು ತೆರೆಯದ ಬಾಗಿಲು
ನಾಲ್ಕು ವರ್ಷಗಳ ಹಿಂದೆಯೇ ಅಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಈ ಹೈಟೆಕ್ ರಂಗಮಂದಿರವನ್ನು ಉದ್ಘಾಟಿಸಿದ್ದರು. ಆದರೆ, ಕಾಮಗಾರಿ ಸಂಪೂರ್ಣ ಮುಗಿದು ಇಷ್ಟು ವರ್ಷ ಕಳೆದರೂ, ರಂಗಮಂದಿರದ ಬಾಗಿಲು ಸಾರ್ವಜನಿಕರಿಗೆ ತೆರೆದಿಲ್ಲ.
ರಂಗಾಸಕ್ತರ ನಿರಾಶೆ, ಅನೈತಿಕ ಚಟುವಟಿಕೆಗಳ ತಾಣ
ಪರಿಣಾಮವಾಗಿ, ಹಾವೇರಿಯಲ್ಲಿ ರಂಗಚಟುವಟಿಕೆಗಳ ಪುನರುಜ್ಜೀವನದ ಕನಸು ಕಂಡಿದ್ದ ರಂಗಕರ್ಮಿಗಳು ತೀವ್ರ ನಿರಾಶೆಗೊಂಡಿದ್ದಾರೆ. ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಈ ರಂಗಮಂದಿರವು ಉಪಯೋಗವಿಲ್ಲದೆ ಹಾಳಾಗುತ್ತಿದೆ ಎಂದು ರಂಗಾಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕಿಂತಲೂ ಆತಂಕಕಾರಿ ವಿಷಯವೆಂದರೆ, ಸಾರ್ವಜನಿಕ ಉಪಯೋಗಕ್ಕೆ ಸಿಗಬೇಕಿದ್ದ ಈ ಹೈಟೆಕ್ ರಂಗಮಂದಿರವು ಇದೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಲಾವಿದ ಮುತ್ತುರಾಜ್ ಮತ್ತು ಪೌರಾಯುಕ್ತ ಕಾಂತರಾಜು ಸೇರಿದಂತೆ ಹಲವರು ಈ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
PublicNext
27/01/2026 10:38 pm
LOADING...