ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್: ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗಳ ಚುನಾವಣೆ ಕೂಡಲೇ ಘೋಷಣೆ ಮಾಡಬೇಕು - ಆರ್.ಬಿ.ಪಾಟೀಲ

ಹಾನಗಲ್ : ಗ್ರಾಮ ಪಂಚಾಯತಿಗಳ ಆಡಳಿತ ಮುಗಿಯುತ್ತಿದ್ದು ರಾಜ್ಯ ಸರ್ಕಾರ ಕೂಡಲೇ ಚುನಾವಣೆ ಘೋಷಣೆ ಮಾಡಬೇಕು. ಇಲ್ಲವೆ ಚುನಾವಣೆ ಘೋಷಣೆಯಾಗುವವರೆಗೆ ಈಗಿರುವ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯನ್ನು ಮುಂದುವರಿಸಿ ಆದೇಶಿಸಬೇಕು ಎಂದು ಹಾನಗಲ್ ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಬಿ.ಪಾಟೀಲ ಒತ್ತಾಯಿಸಿದರು.

ಬುಧವಾರ ಹಾನಗಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಆಡಳಿತವಿಲ್ಲದೆ ಹೋಗಿರುವುದು ಪ್ರಜಾ ಪ್ರತಿನಿಧಿ ಸರ್ಕಾರಕ್ಕೆ ಆತಂಕದ ವಿಷಯವಾಗಿದೆ. ವರ್ಷಾನುಗಟ್ಟಲೆ ತಾಪಂ ಜಿಪಂ ಚುನಾವಣೆ ನಡೆಸದ ಈ ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗಳನ್ನು ಕೂಡ ಇದೇ ಸ್ಥಿತಿಗೆ ತಳ್ಳುವ ಬಹುದೊಡ್ಡ ಹುನ್ನಾರ ಕಾಣುತ್ತಿದೆ.

ತಾಪಂ ಜಿಪಂ ಆಡಳಿತವಿಲ್ಲದೆ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸಲಾರದ ಸ್ಥಿತಿ ಇದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಆತಂಕಕಾರಿ. ಇದರಿಂದ ಸಾರ್ವಜನಿಕರು ಪರದಾಡುವಂತಾಗುತ್ತದೆ. ಕೇವಲ ಅಧಿಕಾರಿಗಳಿಂದ ಜನಪರ ಆಡಳಿತ ನೀಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಸರ್ಕಾರದಲ್ಲಿ ಅಧಿಕಾರಿಗಳ ಆಡಳಿತಕ್ಕೆ ಅವಕಾಶ ಮಾಡಿಕೊಡುವುದು ಯಾರು ಒಪ್ಪತಕ್ಕದ್ದಲ್ಲ.ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿಯೇ ಸರ್ಕಾರಿ ಆಡಳಿತಗಳಿರಬೇಕು. ಸರ್ಕಾರ ಈಗಿರುವ ಸದಸ್ಯರು ಅಧ್ಯಕ್ಷರನ್ನು ಮುಂದುವರಿಸದಿದ್ದರೆ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

Edited By :
PublicNext

PublicNext

29/01/2026 05:36 pm

Cinque Terre

8.64 K

Cinque Terre

1

ಸಂಬಂಧಿತ ಸುದ್ದಿ