ಹಾವೇರಿ: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ಪ್ರವಾಸೋದ್ಯಮಕ್ಕೆ ಗಮನ ನೀಡಿರುವುದನ್ನು ಸಚಿವ ಹೆಚ್.ಕೆ.ಪಾಟೀಲ್ ಸ್ವಾಗತಿಸಿದರು.
ಹಾವೇರಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದ ಅಭಿವೃದ್ಧಿ, ಮೆಡಿಕಲ್ ಟೂರಿಸಂ ಉತ್ತೇಜನ ಹಾಗೂ ಪ್ರವಾಸೋದ್ಯಮ ಗೈಡ್‌ಗಳಿಗೆ ತರಬೇತಿ ನೀಡುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದಾಗಿ ಅವರು ತಿಳಿಸಿದರು.
ಇನ್ನೂ ಹೆಚ್ಚಿನದರ ನಿರೀಕ್ಷೆ
ಆದರೆ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೆಲವು ಘೋಷಣೆಗಳಾಗಿರುವುದು ಸಮಾಧಾನಕರವಾದರೂ, "ಘೋಷಣೆ ಮಾಡಿದ್ದು ಸ್ವಲ್ಪ, ಆಗಬೇಕಿದ್ದು ಬಹಳ ಇದೆ" ಎಂದು ಸಚಿವ ಪಾಟೀಲ್ ಅಭಿಪ್ರಾಯಪಟ್ಟರು. ಬೆಂಗಳೂರು ರೈಲ್ವೆ ಫಾಸ್ಟ್ ಟ್ರೈನ್ ನಿರ್ಣಯವನ್ನೂ ಸ್ವಾಗತಿಸಿದ ಅವರು, ಒಟ್ಟಾರೆ ನಮ್ಮ ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತ ಪಾಲು ಎದುರು ನೋಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
PublicNext
01/02/2026 09:49 pm
LOADING...