ಹಾವೇರಿ: ಜಾಗತಿಕವಾಗಿ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿ ಇರುವಾಗ ಭಾರತದ ಅಭಿವೃದ್ಧಿ ಪಥವನ್ನು ಮುನ್ನಡೆಸಿಕೊಂಡು ಹೋಗುವ ಕೆಲಸ ಈ ಬಜೆಟ್ ಮಾಡಿದೆ ಎಂದು ಮಾಜಿ ಸಿಎಂ ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು ಈಗಾಗಲೇ ಎಕನಾಮಿಕ್ ಸರ್ವೆಯಲ್ಲಿ 7.4 ಅರ್ಥಿಕ ಬೆಳವಣಿಗಿಗೆ ಪೂರಕವಾಗಿ ಬಜೆಟ್ ನಲ್ಲಿ ಆರ್ಥಿಕ ಪಾಲಿಸಿ ಮಾಡಿದ್ದಾರೆ ಎಂದು ತಿಳಿಸಿದರು.
ಮೂಲಭೂತ ಸೌಕರ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಕೈಗಾರಿಕಾ ಮತ್ತು ಸಣ್ಣ ಕೈಗಾರಿಕೆ ವಿಶೇಷ ಅನುದಾನ ನೀಡಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು. ಟೆಕ್ಸ್ ಟೈಲ್ ಉದ್ಯಮ, ಚರ್ಮೋದ್ಯಮ ,ಐಟಿ ಮತ್ತು ಬಿಟಿ ಅಭಿವೃದ್ಧಿಗೆ ಬಹಳಷ್ಟು ಒತ್ತು ನೀಡಿದ್ದಾರೆ.
ಕ್ಯಾನ್ಸರ್ ರೋಗಿಗಳಿಗೆ ವಿದೇಶದಿಂದ ತರಿಸುವ ಔಷಧಿ ರಿಯಾಯಿತಿಯನ್ನ ಮಾನವೀಯತೆ ದೃಷ್ಟಿಯಿಂದ ಮಾಡಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು. ನಾಲ್ಕು ಕರ್ತವ್ಯ ಪಥ ಅಂತಾ ಹೇಳಿದ್ದರು. ಮೊದಲನೆಯದು ಆರ್ಥಿಕ ಬೆಳವಣಿಗೆ ಮಾಡೋದು, ಸಬ್ ಕಾ ಸಾಥ್ ಸಬ್ ವಿಕಾಸ್ ಅನ್ನೋ ದೃಷ್ಟಿಯಿಂದ ಮಾಡಿದ್ದಾರೆ. ಹಣದುಬ್ಬರಕ್ಕೆ ಕಡಿವಾಣ ಹಾಕಲು ಈ ಬಜೆಟ್ ತುಂಬಾ ಸಹಾಯಕವಾಗುತ್ತಿದೆ ಎಂದು ಬೊಮ್ಮಾಯಿ ತಿಳಿಸಿದರು.
PublicNext
01/02/2026 09:43 pm
LOADING...