ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದು
ನಿಜಕ್ಕೂ ದುಃಖಕರ ವಿಚಾರ ಎಂದು ಮಾಜಿ ಸಿಎಂ ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು
ವಿಮಾನ ಅಪಘಾತಗಳಲ್ಲಿ ನಾವು ಅನೇಕ ನಾಯಕರನ್ನು ಕಳೆದುಕೊಂಡಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಅಜಿತ್ ಪವಾರ್ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ದೇವರು ದಯಪಾಲಿಸಲಿ ಎಂದು ಬೊಮ್ಮಾಯಿ ಪ್ರಾರ್ಥನೆ ಸಲ್ಲಿಸಿದರು.
ನಮ್ಮ ತಂದೆ ಜೊತೆ ಅಜಿತ್ ಪವಾರ್ ಅವರ ಚಿಕ್ಕಪ್ಪ ಶರದ್ ಪವಾರ್ ಒಡನಾಟ ಹೊಂದಿದ್ದರು.
ಶರದ್ ಪವಾರ್ ನಮ್ಮ ಮನೆಗೆ ಬಂದಾಗ ಅಜಿತ್ ಪವಾರ್ ಕೂಡಾ ಬಂದು ಹೋಗುತ್ತಿದ್ದರು ಎಂದು ಬೊಮ್ಮಾಯಿ ಮೆಲುಕು ಹಾಕಿದರು.
ಇಂದು ಅಜಿತ್ ಪವಾರ್ ಅವರ ನಿಧನ ದುಃಖ ಉಂಟು ಮಾಡಿದೆ ಎಂದು ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದರು.
Kshetra Samachara
28/01/2026 09:56 pm
LOADING...