ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ: ʼಸಂಸದ ಕ್ರೀಡೋತ್ಸವ, ಖೇಲೋ ಇಂಡಿಯಾʼ ಮೋದಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆ; ಭರತ್ ಬೊಮ್ಮಾಯಿ

ಶಿಗ್ಗಾವಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರದ ಖೇಲೋ ಇಂಡಿಯಾ ಒಂದು ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ಗ್ರಾಸ್‌ರೂಟ್ ಮಟ್ಟದಲ್ಲಿ ಕ್ರೀಡೆಯನ್ನು ಉತ್ತೇಜಿಸುವುದು, ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸಿದ್ಧ ಪಡಿಸುವುದು ಇದರ ಉದ್ದೇಶವಾಗಿದೆ ಎಂದು ಶಿಗ್ಗಾವಿ ಬಿಜೆಪಿ ಯುವ ಮುಖಂಡ, ಉದ್ದಿಮೆದಾರ ಭರತ್ ಬೊಮ್ಮಾಯಿ ಹೇಳಿದರು.

ಇಂದು ಶಿಗ್ಗಾವಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಸ್ತುತ ಪಡಿಸುವ ಧಾರವಾಡ ಸಂಸದ ಕ್ರೀಡಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಮಕ್ಕಳು ಮೊಬೈಲ್ ಬಿಟ್ಟು ಮೈದಾನದತ್ತ ಗಮನಹರಿಸಬೇಕೆಂದೂ ಹೇಳಿದರಲ್ಲದೆ, ತಂತ್ರಜ್ಞಾನದ ಬೆಳವಣಿಗೆ ನಮ್ಮನ್ನು ನಿಷ್ಕ್ರಿಯ, ಚಟುವಟಿಕೆಯಿಲ್ಲದ ಜೀವನಶೈಲಿಯತ್ತ ಕರೆದು ತಂದಿದೆ. ಫಿಟ್‌ನೆಸ್ ಎಂಬುದು ನಮ್ಮ ದೈಹಿಕ ಸ್ವಾಸ್ಥ್ಯ ಕಾಪಾಡಲು ಅನುಕೂಲಕರ. ಹೊಸ ಪೀಳಿಗೆಯ, ಆತ್ಮವಿಶ್ವಾಸಭರಿತ ಕ್ರೀಡಾಪಟುಗಳು ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಕೀರ್ತಿಯನ್ನು ಬೆಳಗುತ್ತಿದ್ದಾರೆ ಎಂದರು.

ಶಿಗ್ಗಾವಿ ವಿರಕ್ತ ಮಠದ ಸಂಗನಬಸವ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಬಂಕಾಪುರದ ಅರಳೆಲೆಮಠದ ಶ್ರೀ ರೇವಣಂಸಿದ್ದೇಶ್ವರ ಮಹಾಸ್ವಾಮಿಗಳು, ಷಟ್‌ಸ್ಥಳ ಗಂಜಿಗಟ್ಟಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು.

ವರದಿ: ಚನ್ನವೀರ ನೀರಲಗಿ, ಪಬ್ಲಿಕ್ ನೆಕ್ಸ್ಟ್

Edited By : Vinayak Patil
Kshetra Samachara

Kshetra Samachara

30/01/2026 08:38 am

Cinque Terre

11.52 K

Cinque Terre

0

ಸಂಬಂಧಿತ ಸುದ್ದಿ