ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ ಸಂಸದರ ಕ್ರೀಡಾ ಮಹೋತ್ಸವ - ಲೋಗೋ ಬಿಡುಗಡೆ

ಶಿಗ್ಗಾವಿ: ಪ್ರಧಾನಿ ಮೋದಿಯವರ ದೂರ ದೃಷ್ಟಿಯ ಚಿಂತನೆ, ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಕ್ರೀಡೆಗಳನ್ನು ಪೋಷಿಸುವುದು ಮತ್ತು ಮುಖ್ಯ ವಾಹಿನಿಯ ಕ್ರೀಡೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ 2036ಕ್ಕೆ 100 ಒಲಂಪಿಕ್ಸ್ ಮೆಡಲ್ ತರುವ ಮೂಲಕ ಭವ್ಯ ಭಾರತವನ್ನು ಪ್ರಜ್ವಲಿಸುವಂತೆ ಮಾಡುವ ಕನಸು ಪ್ರಧಾನಿ ಮೋದಿಯವರದಾಗಿದೆ ಎಂದು ಬಿಜೆಪಿ ಮುಖಂಡ ಭರತ್

ಬೊಮ್ಮಾಯಿ ಹೇಳಿದರು.

ತಾಲೂಕು ಪಟ್ಟಣದ ಕ್ರೀಡಾಂಗಣದಲ್ಲಿ ಜ. 29 ಮತ್ತು 30 ರಂದು ನಡೆಯಲಿರುವ ಧಾರವಾಡ ಲೋಕಸಭಾ ಸಂಸದ ಪ್ರಹ್ಲಾದ್ ಜೋಶಿ ಪ್ರಸ್ತುತಪಡಿಸುವ ದಿವ್ಯ ಸಂಸದರ ಕ್ರೀಡಾ ಮಹೋತ್ಸವ 2025-26ರ ಪ್ರಯುಕ್ತ ಕ್ರೀಡಾಪಟುಗಳ ಲೋಗೋ ಹಾಗೂ ಜೆರ್ಸಿ ಬಿಡುಗಡೆ ಮಾಡಿ ಮಾತನಾಡಿದರು.

ಕ್ರೀಡಾಕೂಟದಲ್ಲಿ ಗುಂಪು ಆಟಗಳಾದ ಕಬಡ್ಡಿ, ಖೋ ಖೋ ಹಾಗೂ ವಾಲಿಬಾಲ್ ಜೊತೆಗೆ ವೈಯಕ್ತಿಕ ಆಟಗಳಾದ 100 ಮೀ., 800 ಮೀ, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಗುಂಡು ಎಸೆತ ಆಟಗಳಿವೆ. ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಅವಕಾಶ ಇದೆ. ವೈಯಕ್ತಿಕ ಆಟದಲ್ಲಿ ಗೆದ್ದವರಿಗೆ ಲೋಕಸಭಾ ಕ್ಷೇತ್ರದ ಮಟ್ಟದಲ್ಲಿ ಅವಕಾಶ ಇರಲಿದೆ. ಹೊನಲು ಬೆಳಕಿನ ಆಟಗಳೂ ನಡೆಯುತ್ತವೆ. ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ ಮಾಡಲಾಗುತ್ತದೆ ಎಂದರು.

ಇಂಟರ್ ನ್ಯಾಷನಲ್ ಮಟ್ಟದಲ್ಲಿ ಉಪಯೋಗಿಸುವ ಮ್ಯಾಟ್ ಕಬಡ್ಡಿ ಆಟಗಾರರಿಗೆ ಬಳಸಲಾಗುತ್ತಿದೆ. ಗುಂಪು ಆಟಗಳಲ್ಲಿ ಪ್ರಥಮ ಸ್ಥಾನ 30 ಸಾವಿರ, ದ್ವಿತೀಯ ಸ್ಥಾನ 20 ಸಾವಿರ ಹಾಗೂ ತೃತೀಯ ಸ್ಥಾನದವರಿಗೆ ಬಹುಮಾನ ವೈಯಕ್ತಿಕ ಬಹುಮಾನ ಎಂದರು. 10 ಸಾವಿರ ವಿತರಿಸಲಾಗುತ್ತದೆ. ಆಟಗಾರರಿಗೂ ನೀಡಲಾಗುವುದು

ಜ. 30 ರಂದು ಸಂಸದ ಪ್ರಹ್ಲಾದ್ ಜೋಶಿ ಹಾಗೂ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿಯವರು ಪ್ರಶಸ್ತಿ ವಿತರಿಸಲಿದ್ದಾರೆ. ಬಂಕಾಪುರ ಅರಳೆಲೆ ಹಿರೇಮಠದ ಶ್ರೀಗಳು ಹಾಗೂ ಗಂಜೀಗಟ್ಟಿ ಚರಮೂರ್ತೇಶ್ವರ ಮಠದ ಶ್ರೀಗಳು ಜೊತೆಗೆ ಭಾಗವಹಿಸಲಿದ್ದಾರೆ ಖಾಸಗಿ ವಾಹಿನಿಯ ಕಿರುತೆರೆ ನಟರಾದ ಅಣ್ಣಯ್ಯ ಆಗಮಿಸಲಿದ್ದಾರೆ ಎಂದರು.

ವರದಿ. ಚನ್ನವೀರ ನೀರಲಗಿ, ಪಬ್ಲಿಕ್ ನೆಕ್ಸ್ಟ್, ಶಿಗ್ಗಾವಿ

Edited By : Manjunath H D
PublicNext

PublicNext

27/01/2026 06:09 pm

Cinque Terre

9.67 K

Cinque Terre

0

ಸಂಬಂಧಿತ ಸುದ್ದಿ