ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಕೇಳುವವರಿಲ್ಲ‌ ಮೆಕ್ಕೆಜೋಳ ಬೆಳೆಗಾರರ ಗೋಳು

ಹಾವೇರಿ: ಹಾವೇರಿ ಜಿಲ್ಲೆಯ ಮೆಕ್ಕೆಜೋಳ ಬೆಳೆಗಾರರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿರುವ ಮೆಕ್ಕೆಜೋಳ ಖರೀದಿಗಿಂತ ರಿಜೆಕ್ಟ್‌ ಆಗುತ್ತಿದೆ!

ಇತ್ತ ಪಿಡಿಪಿಎಸ್ ಯೋಜನೆಯಲ್ಲಿ ರೈತರು ಮೆಕ್ಕೆಜೋಳಕ್ಕೆ ಪ್ರೋತ್ಸಾಹ ಧನ ಪಡೆಯಲು ‌ನೋಂದಣಿಗೆ ಬಂದರೆ ಅದಾಗಲೇ ಪೂರ್ಣಗೊಂಡಿದ್ದು, ಅಧಿಕಾರಿಗಳು ನೋಂದಣಿ ಸಾಧ್ಯವಿಲ್ಲ ಎನ್ನುತ್ತಿದ್ದಾರೆ‌. ಮೆಕ್ಕೆಜೋಳವನ್ನು ಪಿಡಿಪಿಎಸ್ ಯೋಜನೆಯಡಿ ಒಬ್ಬ ರೈತನಿಗೆ ಒಂದು ಎಕರೆಗೆ 12 ಕ್ವಿಂಟಾಲ್‌ ನಂತೆ ಗರಿಷ್ಠ 50 ಕ್ವಿಂಟಾಲ್ ಖರೀದಿ ಮಾಡಲು ನೋಂದಣಿ ಮಾಡಿಸಿಕೊಳ್ಳುವಂತೆ ಸರ್ಕಾರ ಆದೇಶ ನೀಡಿತ್ತು.

ಸರ್ಕಾರ 6 ಲಕ್ಷದ ಎರಡು ಸಾವಿರ ಕ್ವಿಂಟಾಲ್ ನೋಂದಣಿ ಮಾಡಿಸಿಕೊಳ್ಳುವಂತೆ ನಿಗದಿ ಪಡಿಸಿತ್ತು. ಅದರಂತೆ ನೋಂದಣಿ ಮಾಡಿಕೊಂಡಿದ್ದೇವೆ. ನಂತರ ಜಿಲ್ಲಾಧಿಕಾರಿ ಮನವಿ ಮೇರೆಗೆ ಮೂರು ಲಕ್ಷ ಕ್ವಿಂಟಾಲ್ ನೋಂದಣಿ ಮಾಡಿದ್ದೇವೆ. ಸರ್ಕಾರ ನೋಂದಣಿ ಮಾಡಿಕೊಳ್ಳಲು ತಿಳಿಸಿದ್ರೆ ಮಾತ್ರ ನೋಂದಣಿ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಕೃಷಿ ಮಾರುಕಟ್ಟೆ ಸಹಾಯಕ ನಿರ್ದೇಶಕ ಗೋವಿಂದ ಕಬ್ಬೇನಹಳ್ಳಿ.

Edited By : Vinayak Patil
Kshetra Samachara

Kshetra Samachara

02/02/2026 11:08 pm

Cinque Terre

4.12 K

Cinque Terre

0

ಸಂಬಂಧಿತ ಸುದ್ದಿ