ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿಗ್ಗಾವಿ ಕೋಣನಕೇರಿ ರಸ್ತೆ ಅವ್ಯವಸ್ಥೆ ಮುಕ್ತಿ ಯಾವಾಗ?

ಶಿಗ್ಗಾವಿಯಿಂದ ಕೋಣನಕೇರಿ ಮಾರ್ಗವಾಗಿ ಮುಂಡಗೋಡಕ್ಕೆ ತೆರಳುವ ರಸ್ತೆಯು ಸುಮಾರು ವರ್ಷಗಳಿಂದ ಹದಗೆಟ್ಟಿದ್ದು, ರಸ್ತೆಯಲ್ಲಿ ತೆಗ್ಗು ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಅಷ್ಟೇ ಅಲ್ಲದೆ, ಈ ರಸ್ತೆಯಲ್ಲಿ ದಿನನಿತ್ಯ ಶಾಲಾ ವಿದ್ಯಾರ್ಥಿಗಳು ಶಿಗ್ಗಾವಿಗೆ ಸಂಚರಿಸುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತಿದ್ದು, ಇದರ ಬಗ್ಗೆ ಹಲವಾರು ಬಾರಿ ಇಲ್ಲಿಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಅಷ್ಟೇ ಅಲ್ಲದೆ ಸುಮಾರು ವರ್ಷಗಳಿಂದ ಚೆನ್ನಾಗಿ ಇದ್ದ ರಸ್ತೆ ಇಲ್ಲಿ ಯಾವಾಗ ಸಕ್ಕರೆ ಕಾರ್ಖಾನೆ ಆಯಿತೋ ಆವಾಗಿನಿಂದ ಫ್ಯಾಕ್ಟರಿಗೆ ಬರುವ ದೊಡ್ಡ ದೊಡ್ಡ ಲಾರಿಗಳು ಓಡಾಡುವುದರಿಂದ ಸಂಪೂರ್ಣ ಹಾಳಾಗಿ ಹೋಗಿದ್ದು ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.

ಅದಲ್ಲದೆ ಈ ರಸ್ತೆ ರಿಪೇರಿ ಮಾಡಿಸಿ ಎಂದು ಸ್ಥಳೀಯ ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದರೆ, ಈಗ ರಸ್ತೆ ರಿಪೇರಿ ಮಾಡಿಸಲು ಮುಂದಾದರೆ ಇಲ್ಲಿರುವ ಫ್ಯಾಕ್ಟರಿಯವರಿಗೆ ತೊಂದರೆ ಆಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಸಕ್ಕರೆ ಫ್ಯಾಕ್ಟರಿಯವರ ಪರವಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಇನ್ನಾದರೂ ಅಧಿಕಾರಿಗಳು ಹಾಗೂ ಇಲ್ಲಿಯ ಜನಪ್ರತಿಧಿಗಳು ಬೇಗ ರಸ್ತೆ ಕೆಲಸ ಮುಗಿಸಿ ಜನಗಳಿಗೆ, ವಾಹನ ಸವಾರರಿಗೆ ಅನುಕೂಲ ಮಾಡಿಕೊಡುತ್ತಾರಾ ಕಾದು ನೋಡೋಣ

Edited By :
Kshetra Samachara

Kshetra Samachara

27/01/2026 12:01 pm

Cinque Terre

7.72 K

Cinque Terre

0

ಸಂಬಂಧಿತ ಸುದ್ದಿ