ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಧಾನಸೌಧದ ಕಲಾಪ ವೀಕ್ಷಿಸಿದ ಸಕಲೇಶಪುರದ ವಿಶೇಷ ಚೇತನ ಮಕ್ಕಳು

ಸಕಲೇಶಪುರ: ರಾಜಕೀಯ ಕಲಾಪಗಳು ಕೇವಲ ಚರ್ಚೆಯ ವೇದಿಕೆಯಾಗದೆ ಮುಂದಿನ ಪೀಳಿಗೆಗೆ ಪಾಠಶಾಲೆಯಾಗಬೇಕು ಎನ್ನುವ ನಿಟ್ಟಿನಲ್ಲಿ, ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್ ಅವರು ವಿಶೇಷ ಚೇತನ ಮಕ್ಕಳಿಗಾಗಿ ವಿಧಾನಸೌಧ ವೀಕ್ಷಣೆಯ ಅಪರೂಪದ ಅವಕಾಶ ಕಲ್ಪಿಸಿದ್ದಾರೆ.

ಸಕಲೇಶಪುರ ರೋಟರಿ ಸಂಸ್ಥೆಯ ಎನ್.ಕೆ. ಗಣಪಯ್ಯ ಶಾಲೆಯ ಸುಮಾರು 50ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಮಂಗಳವಾರ ಬೆಂಗಳೂರಿನ ವಿಧಾನಸೌಧಕ್ಕೆ ಭೇಟಿ ನೀಡಿ ಕಲಾಪವನ್ನು ವೀಕ್ಷಿಸಿದರು. ಪ್ರಜಾಪ್ರಭುತ್ವದ ಕಾರ್ಯವೈಖರಿ ಮತ್ತು ಸರ್ಕಾರದ ಯೋಜನೆಗಳ ರಚನೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವುದು ಈ ಭೇಟಿಯ ಮುಖ್ಯ ಉದ್ದೇಶವಾಗಿತ್ತು.

ವಿಶೇಷ ಚೇತನ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶಾಸಕರು ಕೈಗೊಂಡ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಭೇಟಿಯ ಮೂಲಕ ಮಕ್ಕಳು ಪ್ರತ್ಯಕ್ಷವಾಗಿ ಸದನದ ಚರ್ಚೆಗಳನ್ನು ವೀಕ್ಷಿಸಿ ಹೊಸ ಅನುಭವವನ್ನು ಪಡೆದುಕೊಂಡರು.

Edited By : Abhishek Kamoji
PublicNext

PublicNext

03/02/2026 10:32 pm

Cinque Terre

3.68 K

Cinque Terre

0

ಸಂಬಂಧಿತ ಸುದ್ದಿ