ಹಾಸನ: ಸ್ಯಾಂಡಲ್‌ವುಡ್ ನಟ ಯಶ್ ಅವರ ತಾಯಿ ಪುಷ್ಪಾ ಅವರಿಗೆ ಸಂಬಂಧಿಸಿದ ವಿದ್ಯಾನಗರದ ಸೈಟ್ ವಿಚಾರ ಹಾಗೂ ಕಾಂಪೌಂಡ್ ತೆರವು ಕಾರ್ಯಾಚರಣೆ ಈಗ ಹೊಸ ತಿರುವು ಪಡೆದುಕೊಂಡಿದೆ. ತಮ್ಮ ಮೇಲೆ ಕೇಳಿಬರುತ್ತಿರುವ 'ಸುಳ್ಳು ದಾಖಲೆ ಸೃಷ್ಟಿ' ಆರೋಪವನ್ನು ಅಂದಿನ ಸತ್ಯಮಂಗಲ ಪಿಡಿಒ ನಟರಾಜ್ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಬಹಿರಂಗ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಿಡಿಒ ನಟರಾಜ್, "ನಾನು ಯಾವುದೇ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಲ್ಲ. ಒಂದು ವೇಳೆ ನಾನು ಅಧಿಕಾರ ದುರುಪಯೋಗಪಡಿಸಿಕೊಂಡು ದಾಖಲೆ ತಿದ್ದಿರುವುದು ಸಾಬೀತಾದರೆ ಕೂಡಲೇ ನನ್ನ ಕೆಲಸಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ನನ್ನ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ," ಎಂದು ಗುಡುಗಿದ್ದಾರೆ.
ನಟ ಯಶ್ ಕುಟುಂಬದ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, "ನಾವು ಬಣ್ಣ ಹಚ್ಚುವವರಲ್ಲ ಅತ್ಯಂತ ಕಷ್ಟಪಟ್ಟು ಓದಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಈ ಕೆಲಸಕ್ಕೆ ಬಂದಿದ್ದೇವೆ. ಈ ಹಿಂದೆ ಪಿಡಿಒ ಸಂಘದ ಜಿಲ್ಲಾ ಅಧ್ಯಕ್ಷನಾಗಿ ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸಿದ್ದೇನೆ. ಜಿಪಿಎ ಹೋಲ್ಡರ್ ದೇವರಾಜು ಅವರು ನನಗೆ ಸಂಬಂಧಿಯಾಗಿರಬಹುದು, ಆದರೆ ಸಂಬಂಧವಿದ್ದಾಕ್ಷಣ ಸುಳ್ಳು ದಾಖಲೆ ಸೃಷ್ಟಿಸಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ.
PublicNext
03/02/2026 05:09 pm
LOADING...