ಬೇಲೂರು : 2026-27ನೇ ಸಾಲಿನ ಪುರಸಭೆ ಬಜೆಟ್ ಸಿದ್ಧತೆಗಾಗಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯು ತೀವ್ರ ವಾಗ್ವಾದ ಮತ್ತು ಗದ್ದಲಕ್ಕೆ ಸಾಕ್ಷಿಯಾಯಿತು. ಪುರಸಭೆ ಆವರಣದಲ್ಲಿ ಅಧ್ಯಕ್ಷೆ ಉಷಾ ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಪಟ್ಟಣದ ಅಭಿವೃದ್ಧಿ ಮತ್ತು ಅನುದಾನ ಹಂಚಿಕೆಯ ವಿಚಾರವಾಗಿ ಸದಸ್ಯರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಹೆಚ್.ಕೆ. ಸುರೇಶ್ ಮಾತನಾಡಿ, "ಪಟ್ಟಣದ ಅಭಿವೃದ್ಧಿಗೆ 23 ವಾರ್ಡ್‌ಗಳ ಎಲ್ಲಾ ಸದಸ್ಯರ ಸಹಕಾರ ಅಗತ್ಯ. ಬಿಕ್ಕೂಡು ರಸ್ತೆಯ ಕಾಮಗಾರಿಯಲ್ಲಿ ಅಳತೆ ತಪ್ಪಿದರೆ ಅಥವಾ ಅವ್ಯವಹಾರ ಕಂಡುಬಂದರೆ, ಎಷ್ಟೇ ಪ್ರಭಾವಿ ವ್ಯಕ್ತಿಗಳಿದ್ದರೂ ಅದನ್ನು ಕಿತ್ತು ಹಾಕಿಸಿ ಪುನಃ ನಿರ್ಮಾಣ ಮಾಡಿಸಲಾಗುವುದು" ಎಂದು ಎಚ್ಚರಿಕೆ ನೀಡಿದರು.
PublicNext
03/02/2026 03:10 pm
LOADING...