ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ : ದೇಹ ಸೋತರೂ ಹೋರಾಟದ ಕಿಚ್ಚು ಆರಿಲ್ಲ' - ಅನಾರೋಗ್ಯದ ನಡುವೆಯೂ ದೇವೇಗೌಡರ ಗುಡುಗು

ಹಾಸನ : "ನನ್ನ ಎರಡು ಕಿಡ್ನಿಗಳು ವೈಫಲ್ಯಕ್ಕೊಳಗಾಗಿವೆ, ಪ್ರತಿ ಮೂರು ದಿನಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದೇನೆ. ಆದರೂ ನನ್ನಲ್ಲಿರುವ ಹೋರಾಟದ ಕಿಚ್ಚು ಮಾತ್ರ ಇನ್ನೂ ಆರಿಲ್ಲ," ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಮಾರ್ಮಿಕವಾಗಿ ನುಡಿದಿದ್ದಾರೆ.

ತಮ್ಮ ಅನಾರೋಗ್ಯದ ಕುರಿತು ಮೊದಲ ಬಾರಿಗೆ ಇಷ್ಟು ಮುಕ್ತವಾಗಿ ಮಾತನಾಡಿದ ಅವರು, ವಯೋಸಹಜ ಕಾಯಿಲೆ ಮತ್ತು ತೀವ್ರ ಆರೋಗ್ಯ ಸಮಸ್ಯೆಯ ನಡುವೆಯೂ ರಾಜ್ಯದ ಹಿತರಕ್ಷಣೆಗಾಗಿ ತಾವು ಸದಾ ಸಿದ್ಧರಿರುವುದಾಗಿ ಸಾರಿದ್ದಾರೆ. ತಮಗೆ ಎದುರಾಗಿರುವ ಕಿಡ್ನಿ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ ಗೌಡರು, ವೈದ್ಯಕೀಯ ಚಿಕಿತ್ಸೆಯ ಭಾಗವಾಗಿ ನಿಯಮಿತವಾಗಿ ಡಯಾಲಿಸಿಸ್ ಪಡೆಯುತ್ತಿರುವುದಾಗಿ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

24/01/2026 07:33 pm

Cinque Terre

1.38 K

Cinque Terre

0

ಸಂಬಂಧಿತ ಸುದ್ದಿ