ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾಸನ ಸೈಟ್ ವಿವಾದ – ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಪುಷ್ಪಾ ಅರುಣ್ ಕುಮಾರ್

ಹಾಸನ: ಜಿಲ್ಲೆಯಲ್ಲಿ ಸದ್ದು ಮಾಡುತ್ತಿರುವ ಸೈಟ್ ವಿವಾದಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ಇಂದು ಹಾಸನದ ಜಿಲ್ಲಾಧಿಕಾರಿ (DC) ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅವರನ್ನು ಭೇಟಿ ಮಾಡಿ ತಮ್ಮ ಬಳಿ ಇರುವ ಅಧಿಕೃತ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪುಷ್ಪಾ, "ನನ್ನ ಬಳಿ ಇರುವ ಎಲ್ಲಾ ದಾಖಲೆಗಳು ಕಾನೂನುಬದ್ಧವಾಗಿವೆ. ಒಂದೇ ಜಾಗಕ್ಕೆ ಎರಡೆರಡು ಖಾತೆಗಳು ಸೃಷ್ಟಿಯಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದರಲ್ಲಿ ಒಂದು ಅಸಲಿ ಮತ್ತು ಇನ್ನೊಂದು ನಕಲಿ (Fake). ನನ್ನ ದಾಖಲೆಗಳು ಒರಿಜಿನಲ್ ಆಗಿದ್ದು, ಯಾರೋ ಕಿಡಿಗೇಡಿಗಳು ಫೇಕ್ ದಾಖಲೆ ಸೃಷ್ಟಿಸಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ

ಈ ವಿವಾದದಿಂದಾಗಿ ತಮಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. "ನಾನು ಕೋಟಿಗಟ್ಟಲೆ ಬಂಡವಾಳ ಹಾಕಿ ಸೈಟ್ ಖರೀದಿಸಿದ್ದೇನೆ. ನಾವು ಸೆಲೆಬ್ರಿಟಿ ಎಂಬ ಕಾರಣಕ್ಕೆ ನಮ್ಮನ್ನು ಗುರಿ ಮಾಡಲಾಗುತ್ತಿದೆ. ಬೇರೆ ಯಾರಾದರೂ ಆಗಿದ್ದರೆ ಈ ಮಟ್ಟದ ವಿವಾದವಾಗುತ್ತಿರಲಿಲ್ಲವೇನೋ" ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

Edited By : Vinayak Patil
PublicNext

PublicNext

02/02/2026 08:05 pm

Cinque Terre

17.13 K

Cinque Terre

0

ಸಂಬಂಧಿತ ಸುದ್ದಿ