ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಜಮಾಡಿ: ನಡುರಸ್ತೆಯಲ್ಲೇ ಪಟಾಕಿ ಸಿಡಿಸಿ , ಕುಣಿದು ಕೇರಳ ವಿದ್ಯಾರ್ಥಿಗಳ ಪುಂಡಾಟ- ವಿಡಿಯೋ ವೈರಲ್

ಹೆಜಮಾಡಿ: ಉಡುಪಿಯ ಗಡಿಭಾಗ ಹೆಜಮಾಡಿಯಲ್ಲಿ ಕೇರಳದ ವಿದ್ಯಾರ್ಥಿಗಳು ರಾತ್ರಿ ವೇಳೆ ರಸ್ತೆಯಲ್ಲಿ ನಡೆಸಿರುವ ಹುಚ್ಚಾಟ ವ್ಯಾಪಕ ಆಕ್ರೋಶಕ್ಕೆ ಈಡಾಗಿದೆ. ಕೇರಳದಿಂದ ಎರಡು ಬಸ್ಸುಗಳಲ್ಲಿ ಉಡುಪಿ ಕಡೆಗೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ರಸ್ತೆಯಲ್ಲಿ ಬಸ್ಸು ನಿಲ್ಲಿಸಿ ಕುಣಿದು ಕುಪ್ಪಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ರಸ್ತೆಯಲ್ಲೇ ಪಟಾಕಿ ಸೇರಿಸಿ ಹುಚ್ಚಾಟ ಮೆರೆದಿದ್ದಾರೆ.

ಉಡುಪಿ ಮತ್ತು ದಕ್ಷಿಣ ಕನ್ನಡದ ಗಡಿ ಭಾಗ ಹೆಜಮಾಡಿ ಟೋಲ್ ಗೇಟ್ ಸಮೀಪ ಈ ಘಟನೆ ಸಂಭವಿಸಿದೆ. ಕೇರಳ ವಿದ್ಯಾರ್ಥಿಗಳ ಈ ಹುಚ್ಚಾಟದ ವಿಡಿಯೋ ಮೊಬೈಲ್ ಗಳಲ್ಲಿ ದಾಖಲಾಗಿದ್ದು ವೈರಲ್ ಆಗುತ್ತಿದೆ. ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Manjunath H D
PublicNext

PublicNext

04/02/2026 09:30 am

Cinque Terre

6.86 K

Cinque Terre

1

ಸಂಬಂಧಿತ ಸುದ್ದಿ