ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಸಿಟಿವಿ ಕಣ್ತಪ್ಪಿಸಲು ಹೋಗಿ ಕ್ಲೋಸಪ್‌ನಲ್ಲಿ ಸೆರೆಯಾದ ಕಳ್ಳನ ಮುಖ: ಪೇಚಿಗೆ ಸಿಲುಕಿದ ಕಳ್ಳ

ಬಲರಾಮಪುರ: ಸಿಸಿಟಿವಿ ಕ್ಯಾಮೆರಾದ ಕಣ್ಣು ತಪ್ಪಿಸಿ ಕಳ್ಳತನ ಮಾಡಲು ಮಾಸ್ಟರ್ ಪ್ಲಾನ್ ಮಾಡಿದ್ದ ಕಳ್ಳನೊಬ್ಬ, ಕೊನೆಗೆ ತನ್ನದೇ ಯೋಜನೆಯಿಂದ ಪೇಚಿಗೆ ಸಿಲುಕಿದ್ದಾನೆ. ಬಲರಾಮಪುರದಲ್ಲಿ ನಡೆದ ಈ ವಿಲಕ್ಷಣ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದ್ದು, ಕಳ್ಳನ ವಿಚಿತ್ರ ಪ್ರಯತ್ನಕ್ಕೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಹೌದು ಕಳ್ಳತನಕ್ಕೆ ಯತ್ನಿಸುವ ಮುನ್ನ, ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಕಳ್ಳ ವಿಶಿಷ್ಟ ಯೋಜನೆಯನ್ನು ರೂಪಿಸಿದ್ದ. ಕ್ಯಾಮೆರಾದ ದೃಷ್ಟಿ ಮರೆಮಾಚುವ ಉದ್ದೇಶದಿಂದ, ಅದರ ಮೇಲೆ ಬಟ್ಟೆ ಅಥವಾ ಕೈಯನ್ನು ಅಡ್ಡ ಹಿಡಿದು ಅದನ್ನು ಮುಚ್ಚಲು ಮುಂದಾದ. ಆದರೆ, ವಿಧಿ ವಿಪರ್ಯಾಸವೆಂದರೆ, ಕ್ಯಾಮೆರಾವನ್ನು ಮುಚ್ಚಲು ಆತ ಹತ್ತಿರ ಹೋದಾಗ, ಕಳ್ಳನ ಮುಖ ಅತ್ಯಂತ ಸ್ಪಷ್ಟವಾಗಿ, ಕ್ಲೋಸಪ್‌ನಲ್ಲಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ! ತಾನು ಕ್ಯಾಮೆರಾವನ್ನು ಯಶಸ್ವಿಯಾಗಿ ಮುಚ್ಚುತ್ತಿದ್ದೇನೆ ಎಂಬ ಭ್ರಮೆಯಲ್ಲಿದ್ದ ಆ ಕಳ್ಳನ ಪೂರ್ಣ ಚಹರೆ ಈಗ ಪೊಲೀಸರ ಕೈ ಸೇರಿದೆ.

ಸಿಸಿಟಿವಿ ಇರುವುದನ್ನು ಅರಿತ ತಕ್ಷಣವೇ ಆತಂಕಗೊಂಡ ಕಳ್ಳ, ಕಳ್ಳತನದ ಯೋಜನೆಯನ್ನು ಅರ್ಧಕ್ಕೆ ಬಿಟ್ಟು ಪರಾರಿಯಾಗಿದ್ದಾನೆ. ಆದರೆ, ಆತ ಪರಾರಿಯಾಗುವಷ್ಟರಲ್ಲಿ ಆತನ ಮುಖದ ಸ್ಪಷ್ಟ ಚಿತ್ರಣ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಈ ಹಾಸ್ಯಾಸ್ಪದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. "ಕಳ್ಳತನ ಮಾಡಲು ಹೊರಟವನಿಗೆ ಅದೃಷ್ಟವೂ ಸಾಥ್ ಕೊಡಲಿಲ್ಲ, ಬುದ್ಧಿಯೂ ಸಾಥ್ ಕೊಡಲಿಲ್ಲ" ಎಂದು ನೆಟ್ಟಿಗರು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಪೊಲೀಸರು ಈ ದೃಶ್ಯಾವಳಿಯನ್ನು ಆಧರಿಸಿ ಕಳ್ಳನಿಗಾಗಿ ಬಲೆ ಬೀಸಿದ್ದಾರೆ.

Edited By : Nirmala Aralikatti
PublicNext

PublicNext

04/02/2026 12:19 pm

Cinque Terre

10.24 K

Cinque Terre

0

ಸಂಬಂಧಿತ ಸುದ್ದಿ