ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿಯಲ್ಲಿ ಹೆಚ್ಚಿದ ಆತಂಕ: 15 ದಿನಗಳಲ್ಲಿ 800ಕ್ಕೂ ಹೆಚ್ಚು ನಾಪತ್ತೆ, ಹೆಣ್ಣುಮಕ್ಕಳೇ ಅಧಿಕ!

ನವದೆಹಲಿ: 2026ರ ಜನವರಿ ಮೊದಲ 15 ದಿನಗಳಲ್ಲಿ ದೆಹಲಿಯಲ್ಲಿ 800ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಈ ನಾಪತ್ತೆ ಪ್ರಕರಣಗಳಲ್ಲಿ ಸುಮಾರು ಮೂರನೇ ಎರಡರಷ್ಟು ಮಹಿಳೆಯರು ಮತ್ತು ಹುಡುಗಿಯರಿದ್ದಾರೆ ಎಂದು ಪಿಟಿಐಗೆ ಲಭ್ಯವಾಗಿರುವ ದೆಹಲಿ ಪೊಲೀಸರ ಅಧಿಕೃತ ಮಾಹಿತಿ ತಿಳಿಸಿದೆ.

ಜನವರಿ 1ರಿಂದ 15ರ ಅವಧಿಯಲ್ಲಿ ಒಟ್ಟು 807 ಜನರು ಕಾಣೆಯಾಗಿದ್ದು, ಇದು ಪ್ರತಿದಿನ ಸರಾಸರಿ 54 ಜನರು ನಾಪತ್ತೆಯಾದಂತಾಗಿದೆ. ನಾಪತ್ತೆಯಾದವರ ಪೈಕಿ 509 ಮಹಿಳೆಯರು ಮತ್ತು ಹುಡುಗಿಯರಾಗಿದ್ದರೆ, 298 ಪುರುಷರಾಗಿದ್ದಾರೆ.

ಮಕ್ಕಳ ನಾಪತ್ತೆ ಪ್ರಕರಣಗಳು

ನಾಪತ್ತೆಯಾದ ಒಟ್ಟು 807 ಜನರಲ್ಲಿ 191 ಅಪ್ರಾಪ್ತ ವಯಸ್ಕರು ಮತ್ತು 616 ವಯಸ್ಕರಿದ್ದಾರೆ. ಜನವರಿ 1ರಿಂದ 15ರ ಅವಧಿಯಲ್ಲಿ ಪ್ರತಿದಿನ ಸರಾಸರಿ 13 ಮಕ್ಕಳು ಕಾಣೆಯಾಗಿದ್ದಾರೆ. ಒಟ್ಟು 191 ಕಾಣೆಯಾದ ಅಪ್ರಾಪ್ತ ವಯಸ್ಕರಲ್ಲಿ 146 ಮಂದಿ ಹುಡುಗಿಯರಾಗಿದ್ದಾರೆ.

ಕಾಣೆಯಾದ ಅಪ್ರಾಪ್ತ ವಯಸ್ಕರಲ್ಲಿ 169 ಮಂದಿ ಹದಿಹರೆಯದವರಾಗಿದ್ದು, ಅವರಲ್ಲಿ 138 ಹುಡುಗಿಯರು ಮತ್ತು 31 ಹುಡುಗರು ಸೇರಿದ್ದಾರೆ.

8 ರಿಂದ 12 ವರ್ಷ ವಯಸ್ಸಿನ 13 ಮಕ್ಕಳು (8 ಹುಡುಗರು ಮತ್ತು 5 ಹುಡುಗಿಯರು) ನಾಪತ್ತೆಯಾಗಿದ್ದು, ಈ ಪೈಕಿ ಕೇವಲ ಮೂವರು ಹುಡುಗರನ್ನು ಮಾತ್ರ ಪತ್ತೆಹಚ್ಚಲಾಗಿದೆ.

ಎಂಟು ವರ್ಷದೊಳಗಿನ ವಿಭಾಗದಲ್ಲಿ ಒಟ್ಟು 9 ಮಕ್ಕಳು ಕಾಣೆಯಾಗಿದ್ದು, ಮೂವರು ಹುಡುಗರು ಪತ್ತೆಯಾಗಿದ್ದಾರೆ ಮತ್ತು ಉಳಿದ ಆರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ.

ಪತ್ತೆ ಕಾರ್ಯಾಚರಣೆ

ಪೊಲೀಸರ ಅಂಕಿ-ಅಂಶಗಳ ಪ್ರಕಾರ, ಒಟ್ಟು ನಾಪತ್ತೆಯಾದ 807 ಜನರಲ್ಲಿ 235 ಮಂದಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ನಿರ್ದಿಷ್ಟವಾಗಿ ಹದಿಹರೆಯದವರ ಪ್ರಕರಣಗಳಲ್ಲಿ, 29 ಹುಡುಗಿಯರು ಮತ್ತು 19 ಹುಡುಗರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆದರೆ, ಸುಮಾರು ಶೇಕಡಾ 71ರಷ್ಟು ಹದಿಹರೆಯದವರು ಇನ್ನೂ ಪತ್ತೆಯಾಗಿಲ್ಲ ಎಂಬುದು ಆತಂಕಕಾರಿ ವಿಷಯವಾಗಿದೆ.

ವಯಸ್ಕರ ನಾಪತ್ತೆ

ನಾಪತ್ತೆಯಾದವರಲ್ಲಿ ವಯಸ್ಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಜನವರಿ ಮೊದಲ 15 ದಿನಗಳಲ್ಲಿ 363 ಮಹಿಳೆಯರು ಮತ್ತು 253 ಪುರುಷರು ಸೇರಿದಂತೆ ಒಟ್ಟು 616 ವಯಸ್ಕರು ಕಾಣೆಯಾಗಿದ್ದಾರೆ. ಈ ಪೈಕಿ 90 ಪುರುಷರು ಮತ್ತು 91 ಮಹಿಳೆಯರನ್ನು ಪೊಲೀಸರು ಪತ್ತೆಹಚ್ಚಿದ್ದರೂ, 435 ಮಂದಿ ಇನ್ನೂ ಪತ್ತೆಯಾಗಿಲ್ಲ.

2025ರ ವಾರ್ಷಿಕ ಅಂಕಿಅಂಶ

ಕಳೆದ 2025ರಲ್ಲಿ ದೆಹಲಿಯಲ್ಲಿ ಒಟ್ಟು 24,508 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣಗಳಲ್ಲಿ ಶೇಕಡಾ 60ಕ್ಕೂ ಹೆಚ್ಚು (14,870) ಮಹಿಳೆಯರಾಗಿದ್ದು, 9,638 ಪುರುಷರು ನಾಪತ್ತೆಯಾಗಿದ್ದಾರೆ. ಪೊಲೀಸರು 15,421 ವ್ಯಕ್ತಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರೂ, 9,087 ಪ್ರಕರಣಗಳು ಇನ್ನೂ ಬಗೆಹರಿಯದೆ ಉಳಿದಿವೆ ಎಂದು ಅಂಕಿಅಂಶಗಳು ತೋರಿಸಿವೆ.

Edited By : Vijay Kumar
PublicNext

PublicNext

04/02/2026 02:18 pm

Cinque Terre

9.27 K

Cinque Terre

0

ಸಂಬಂಧಿತ ಸುದ್ದಿ